ಡಾ. ಕಸ್ತೂರಿರಂಗನ್ ವರದಿ ಜಾರಿ ಮಾಡದಿರಲು ತೀರ್ಮಾನ

Kannada News

06-03-2017 215

ಬೆಂಗಳೂರು: ಮಲೆನಾಡು ಹಾಗೂ ಕರಾವಳಿ ಭಾಗದ ಜನರಿಗೆ ಮರಣ ಶಾಸನ ಎಂದೇ ಹೇಳಿರುವ ಡಾ. ಕಸ್ತೂರಿರಂಗನ್ ವರದಿ ಜಾರಿ ಮಾಡದಿರಲು ರಾಜ್ಯ ತೀರ್ಮಾನಿಸಿದೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯುತ್ತಿರುವುದು ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿರುವುದರಿಂದ ವರದಿಯನ್ನು ಅನುಷ್ಠಾನ ಮಾಡದೆ ಸದ್ಯದಲ್ಲೇ ರಾಜ್ಯ ಸರ್ಕಾರ ತಕರಾರು ಅರ್ಜಿ ಸಲ್ಲಿಸಲಿದೆ.

ಡಾ. ಕಸ್ತೂರಿರಂಗನ್ ವರದಿಯಿಂದ ಬೆಳಗಾವಿ ಜಿಲ್ಲೆಯ ಖಾನಾಪುರ 62 ಹೆಕ್ಟೇರ್, ಬೆಳಗಾವಿ ಒಂದು ಹೆಕ್ಟೇರ್, ಚಾಮರಾಜನಗರದ ಗುಂಡ್ಲುಪೇಟೆಯ 21, ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು 27, ಕೊಪ್ಪ 32, ಮೂಡಗೆರೆ 27, ನರಸಿಂಹರಾಜಪುರ 35, ಶೃಂಗೇರಿ 26, ಕೊಡಗು ಜಿಲ್ಲೆಯ ಮಡಿಕೇರಿ 23, ಸೋಮವಾರಪೇಟೆಯ 11, ವಿರಾಜಪೇಟೆಯ 21, ಹಾಸನ ಜಿಲ್ಲೆಯ ಆಲೂರು 1, ಸಕಲೇಶಪುರ 34, ದ.ಕನ್ನಡದ ಬೆಳ್ತಂಗಡಿ 17, ಪುತ್ತೂರು 11, ಸುಳ್ಯ 18, ಉ.ಕನ್ನಡ ಜಿಲ್ಲೆಯ ಆಂಕೋಲಾ 43, ಭಟ್ಕಳ 28, ಹೊನ್ನಾವರ 44, ಜೋಯ್ಡಾ 110, ಕಾರವಾರ 39, ಕುಮ್ಟಾ 43, ಸಿದ್ದಾಪುರ 107, ಸಿರಸಿ 125, ಯಲ್ಲಾಪುರ 87, ಮೈಸೂರಿನ ಎಚ್.ಡಿ.ಕೋಟೆ 62, ಶಿವಮೊಗ್ಗದ ಹೊಸನಗರ 126, ಸಾಗರ 134, ಶಿಕಾರಿಪುರ 12, ಶಿವಮೊಗ್ಗ 66, ತೀರ್ಥಹಳ್ಳಿ 146, ಉಡುಪಿಯ ಕಾರ್ಕಳ 13, ಕುಂದಾಪುರದ 24 ಹೆಕ್ಟೇರ್ ಈ ವ್ಯಾಪ್ತಿಗೆ ಒಳಪಡುತ್ತದೆ.ಅಲ್ಲದೆ ವಿದ್ಯುತ್, ನೀರಾವರಿ, ಕೈಗಾರಿಕೆ ಸೇರಿದಂತೆ ಯಾವುದೇ ರೀತಿಯ ಹೊಸ ಯೋಜನೆಗಳನ್ನು ಜಾರಿ ಮಾಡಬೇಕಾದರೆ ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯಬೇಕು. ಹೀಗಾಗಿ ಸರ್ಕಾರ ವರದಿಯನ್ನು ಅನುಷ್ಠಾನ ಮಾಡದಿರಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.

Links :
ಸಂಬಂಧಿತ ಟ್ಯಾಗ್ಗಳು

ಸಂಬಂಧಿತ ಟ್ಯಾಗ್ಗಳನ್ನು ಲಭ್ಯವಿಲ್ಲಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ