ಮಾಜಿ ಪ್ರಿಯಕರನ ವಿರುದ್ಧ ಅತ್ಯಾಚಾರ ದೂರು !

Kannada News

04-07-2017

ಬೆಂಗಳೂರ:  ಗಂಡ ಊರಿನಲ್ಲಿ ಇಲ್ಲದಾಗ ತನ್ನನ್ನು ಅಪಹರಿಸಿ ಅತ್ಯಾಚಾರವೆಸಗಿದ್ದಾನೆ ಎಂದು ಮಹಿಳೆಯೊಬ್ಬಳು ತನ್ನ ಹಳೆಯ ಪ್ರಿಯಕರನ ವಿರುದ್ಧ ಕಾಟನ್‍ ಪೇಟೆ ಪೊಲೀಸರಿಗೆ ದೂರು ನೀಡಿದ್ದಾಳೆ. ಅರ್ಜುನ್ ಸಿಂಗ್ ಎಂಬಾತನ ವಿರುದ್ಧ ಗೃಹಿಣಿ ದೂರು ನೀಡಿದ್ದಾರೆ. ಅರ್ಜುನ್ ಸಿಂಗ್ ಈ ಹಿಂದೆ ಈ ಮಹಿಳೆಯನ್ನು ಪ್ರೀತಿಸುತ್ತಿದ್ದ ಎಂದು ತಿಳಿದು ಬಂದಿದ್ದೂ, ಆರೋಪಿ ಅರ್ಜುನ್ ಸಿಂಗ್ ಮಾಮೂಲಿಪೇಟೆಯಲ್ಲಿ ಉಡುಗೋರೆ ಅಂಗಡಿ ಇಟ್ಟುಕೊಂಡಿದ್ದಾರೆ. ದೂರು ನೀಡಿದ ಮಹಿಳೆ ಜನವರಿ ತಿಂಗಳಲ್ಲಿ ನಾಪತ್ತೆಯಾಗಿದ್ದಳು. ಈ ಬಗ್ಗೆ ಗಂಡ ಕಾಟನ್‍ ಪೇಟೆ ಠಾಣೆಯಲ್ಲಿ ದೂರು ನೀಡಿದ್ದರು. ಅದರಂತೆ ಪೊಲೀಸರು ಆಕೆಯನ್ನು ರಾಜಸ್ತಾನದಲ್ಲಿ ಪತ್ತೆಮಾಡಿ, ಬೆಂಗಳೂರಿಗೆ ಕರೆ ತಂದಿದ್ದರು. ಮತ್ತೆ ಎಪ್ರಿಲ್ 21ರಂದು ಆಕೆ ನಾಪತ್ತೆಯಾಗಿದ್ದು, ಈ ಬಗ್ಗೆಯೂ ಗಂಡ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ರಾಜಸ್ತಾನಕ್ಕೆ ತೆರಳಿ ಅರ್ಜುನ್‍ ಸಿಂಗ್ ನೊಂದಿಗೆ ಇದ್ದ ಈಕೆಯನ್ನು ಕರೆ ತಂದು ಗಂಡನಿಗೆ ಒಪ್ಪಿಸಿದ್ದರು. ಇದೀಗ ಗಂಡ ಮತ್ತು ಹೆಂಡತಿ ಕಾಟನ್‍ಪೇಟೆಗೆ ಬಂದು ಈ ದೂರು ನೀಡಿದ್ದಾರೆ. ಇತ್ತೀಚೆಗೆ ಗಂಡ ಕಾರ್ಯ ನಿಮಿತ್ತ ರಾಜಸ್ತಾನಕ್ಕೆ ಹೋಗಿದ್ದಾಗ, ಆರೋಪಿ ತನ್ನನ್ನು ಅಪಹರಿಸಿ ಮೈಸೂರು, ಮಂಗಳೂರು ಮತ್ತು ರಾಜಸ್ತಾನಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.  ಅತ್ಯಾಚಾರಕ್ಕೆ ಸಹಕರಿಸದಿದ್ದರೆ ಅಶ್ಲೀಲ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಆತ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ. ಇದೊಂದು ಜಟಿಲ ಪ್ರಕರಣವಾಗಿದ್ದು, ಇಬ್ಬರ ಹೇಳಿಕೆಗಳನ್ನು ಪಡೆದು ಸಮಗ್ರ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ