ಕಂಬಳ: ರಾಷ್ಟ್ರಪತಿಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ !

Kannada News

04-07-2017 200

ಉಡುಪಿ: ಕಂಬಳ ‌ವಿಧೇಯಕಕ್ಕೆ ರಾಷ್ಟ್ರಪತಿಗಳ ಅಂಕಿತ ವಿಚಾರವಾಗಿ, ರಾಷ್ಟ್ರಪತಿಯವರಿಗೆ ಕಂಬಳಾಭಿಮಾನಿಗಳ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ, ಎಂದು ಕಂಬಳ ಸಮಿತಿ ಅಧ್ಯಕ್ಷರಾದ ಶಾಂತಾರಾಮ ಹೇಳಿದ್ದಾರೆ. ಅಲ್ಲದೇ ಕಂಬಳ ಆರಾಧನಾ ಮತ್ತು ಜಾನಪದ ಕ್ರೀಡೆ. ವಿದೇಯಕಕ್ಕೆ ಅಂಕಿತ ತರುವಲ್ಲಿ ಶ್ರಮಿಸಿದ ಎಲ್ಲಾ  ಸಂಸದರಿಗೆ ಮತ್ತು ಶಾಸಕರಿಗೆ ವಿವಿಧ ಸಂಘ ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು. ಕಂಬಳ ಕ್ರೀಡಾ ನಿಯಮಗಳ ಒಂದು ವಿಚಾರದಲ್ಲಿ ಆಕ್ಷೇಪವಿದೆ. ಅದನ್ನು ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಸರಿಪಡಿಸಿಕೊಳ್ಳುತ್ತೇವೆ ಎಂದು ತಿಳಿಸಿದ ಅವರು ಕಂಬಳವನ್ನು, ಒಂದು ಉತ್ತಮ ಕ್ರೀಡೆಯಾಗಿ ಸಿದ್ಧಪಡಿಸುತ್ತೇವೆ ಎಂದು ತಿಳಿಸಿದ್ದಾರೆ. ಅಲ್ಲದೇ ಈ ಕುರಿತು ನಳಿನ್ ಕುಮಾರ್ ಪ್ರತಿಕ್ರಿಯಿಸಿದ್ದೂ, ರಾಜ್ಯದ ಕರಾವಳಿಯ ಜಾನಪದ ಕ್ರೀಡೆಯಾಗಿರುವ ಕಂಬಳಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿರುವುದಕ್ಕೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.ಕಂಬಳ ಕ್ರೀಡೆಯು ಧಾರ್ಮಿಕ ಮಹತ್ವವನ್ನು ಹೊಂದಿದೆ, ಜಾತಿ ಮತ ಭೇಧವಿಲ್ಲದೆ ಎಲ್ಲಾ ಧರ್ಮದವರು ಕಂಬಳದಲ್ಲಿ ಪಾಲ್ಗೊಳ್ಳುತ್ತಾರೆ. ಹೀಗಾಗಿ ಕಂಬಳ ಸಾಮರಸ್ಯದ ಸಂಕೇತವೂ ಹೌದು. ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಸೇರಿದಂತೆ ಎಲ್ಲರ ಒಗ್ಗಟ್ಟಿನ ಪ್ರಯತ್ನದಿಂದಾಗಿ ಇದಕ್ಕೆ ಜಯ ದೊರೆತಿದೆ ಎಂದು ಹೇಳಿದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ