ದೇಶವನ್ನು ಅಧೋಗತಿಗೆ ಒಯ್ಯುತ್ತಿದ್ದಾರೆ ಮೋದಿ !

Kannada News

04-07-2017

ಹುಬ್ಬಳ್ಳಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಡವರು ಹಾಗೂ ಶ್ರೀಮಂತರಲ್ಲಿ ತಾರತಮ್ಯ ಹೆಚ್ಚು ಮಾಡುತ್ತಿದ್ದಾರೆ ಎಂದು ಸಮಾಜ ಪರಿವರ್ತನಾ ಸಮೂದಾಯದ ಮುಖ್ಯಸ್ಥ ಎಸ್‌ ಆರ್ ಹಿರೇಮಠ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಅವರು, ನರೇಂದ್ರ ಮೋದಿ ತಮ್ಮ ಅಧಿಕಾರವನ್ನು ಬಳಸಿ ರೈತರು, ದಲಿತರು, ಅಲ್ಪ ಸಂಖ್ಯಾತರ ಬಗ್ಗೆ ಯಾವುದೇ ಕಾಳಜಿ ಇಲ್ಲದೇ, ದೇಶದ ಸಂಸ್ಕೃತಿಯನ್ನು ಗಾಳಿಗೆ ತೂರಿ ಮನ ಬಂದಂತೆ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಅಧೋಗತಿಗೆ ಒಯುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪ್ರಜಾಪ್ರಭುತ್ವ ಉಳಿಸಲು ಯುವಕರು, ಜನಾಂದೋಲನ ರೂಪಿಸುವ ಕಾಲ ಬಂದಿದೆ. ಈ ದುರಾಡಳಿತ ವಿರುದ್ಧ ಜನಾಂದೋಲನ ರೂಪಿಸಲು ಜನ ಸಂಗ್ರಾಮ ಪರಿಷತ್ ಹಾಗೂ ಸಮಾನ ಮನಸ್ಕರ ಸಂಘಟನೆಗಳು ಕರೆ ನೀಡುತ್ತವೆ. ಎಚ್ ಎಂ ಟಿ ಸಂಸ್ಥೆಯ 43 ಎಕರೆ 7 ಗುಂಟೆ ಜಾಗವನ್ನು ಕಾನೂನು ಬಾಹಿರವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಆ ಅರಣ್ಯ ಭೂಮಿಯನ್ನು ವಿವಿಧ ಸಂಸ್ಥೆ ಹಾಗೂ ವ್ಯಕ್ತಿಗಳಿಗೆ ಕೊಟ್ಟಿದ್ದನ್ನು ತೀವ್ರವಾಗಿ ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಈ ಕುರಿತು ಎಫ್.ಐ.ಆರ್ ದಾಖಲು ಮಾಡುವಂತೆ ಸಿಬಿಐ ಯನ್ನು ಒತ್ತಾಯಿಸಿದರು. ಎಫ್.ಐ.ಆರ್ ದಾಖಲಿಸುವಂತೆ ಸಿಬಿಐಗೆ ಪತ್ರ ಬರೆದಿರುವಿದಾಗಿಯೂ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ