ಪ್ರತಿಭಟನೆಯ ಎಚ್ಚರಿಕೆ ನೀಡಿದ ಹೆಚ್.ಡಿ.ರೇವಣ್ಣ !

Kannada News

04-07-2017

ಹಾಸನ: ಕಳಪೆ ಬಿತ್ತನೆ ಆಲೂಗಡ್ಡೆಯಿಂದ ರೈತರಿಗೆ ಆಗಿರುವ ನಷ್ಟ ಮತ್ತು ತೆಂಗು, ಅಡಿಕೆ, ಭತ್ತ ಬೆಳೆಗಳು ಕಳೆದ ೩ ವರ್ಷ ಗಳಿಂದ ಮಳೆ ಇಲ್ಲದೆ ಹಾನಿಗೊಳಗಾಗಿದ್ದು, ಈ ಕುರಿತು ರೈತರ ಹಿತ ರಕ್ಷಣೆಯಿಂದ, ಸರ್ಕಾರ ಇನ್ನೂ ೧೫ ದಿನಗಳಲ್ಲಿ  ಪರಿಹಾರ ನೀಡದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಜೆಡಿಎಸ್ ನಾಯಕ ಹಾಗೂ ಶಾಸಕ ಹೆಚ್.ಡಿ.ರೇವಣ್ಣ ಎಚ್ಚರಿಕೆ ನೀಡಿದ್ದಾರೆ. ಹಾಸನದಲ್ಲಿಂದು ಮಾತನಾಡಿದ ಅವರು, ಜಿಲ್ಲಾ ಆಡಳಿತವೇ ವಿತರಿಸಿದ ದೃಢೀಕೃತ ಆಲೂಗಡ್ಡೆ ಬಿತ್ತನೆ ಹುಟ್ಟುವ ಮೊದಲೇ ಹಾನಿಯಾಗಿದೆ. ಇದಕ್ಕೆ ಸರ್ಕಾರವೇ ಹೊಣೆ ಹೊತ್ತು, ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿದ್ದರೇ ಪ್ರತಿಭಟನೆ ಅನಿವಾರ್ಯ ಎಂದಿದ್ದಾರೆ.

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ