ಕನ್ನಡ ವಿರೋಧಿ ಧೋರಣೆ: ನಿರ್ದೇಶಕರ ಬೆವರಿಳಿಸಿದ ಜಿ.ಸಿದ್ದರಾಮಯ್ಯ !

Kannada News

04-07-2017

ಮೈಸೂರು: ಮೈಸೂರಿನ ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾಲಯಕ್ಕೆ (ಸಿ.ಎಫ್.ಟಿ.ಅರ್.ಐ) ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ  ಪ್ರೊ.ಎಸ್ ಜಿ.ಸಿದ್ದರಾಮಯ್ಯ ಭೇಟಿ ನೀಡಿ ಇಲ್ಲಿನ ನಿರ್ದೇಶಕರಾದ ರಾಮರಾಜಶೇಖರನ್ ಅವರಿಗೆ ತರಾಟೆಗೆ ತೆಗೆದುಕೊಂಡರು. ಕಳೆದ ಕೆಲ ತಿಂಗಳಿನಿಂದ ಕನ್ನಡ ನೌಕರರಿಗೆ ಇಲ್ಲಿನ  ನಿದೇರ್ಶಕ ರಾಮರಾಜಶೇಖರನ್  ಕಿರುಕುಳ ನೀಡುತ್ತಿದ್ದಾರೆ, ಎಂದು ಆರೋಪಗಳು ಕೇಳಿಬಂದಿತ್ತು. ಸಂಸ್ಥೆಯಲ್ಲಿ ಕನ್ನಡದ ಅನುಷ್ಠಾನ ಯಾವ ರೀತಿ ಇದೆ ಎಂದು ಇದೇ ವೇಳೆ ಅಧ್ಯಕ್ಷರಿಂದ ಪರಿಶೀಲನೆ ನಡೆಸಲಾಯಿತು. ಮತ್ತು ಆಡಳಿತದಲ್ಲಿ ಸಾಮರಸ್ಯ ಹಾಳಾಗಿದೆ ಎಂದು ತರಾಟೆಗೆ ತೆಗೆದಿಕೊಂಡ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್ ಜಿ.ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿರುವ ಈ ಸಂಸ್ಥೆಯಲ್ಲಿ ಸ್ಥಳೀಯ ಭಾಷಿಕರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ. ಸಿ.ಎಫ್.ಟಿ.ಆರ್.ಐ ನ ಕನ್ನಡ ಘಟಕವನ್ನು ಏಕಾಏಕಿ ಏಕೆ ಕಿತ್ತು ಹಾಕಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದರಿಂದ ಕಕ್ಕಾಬಿಕ್ಕಿಯಾದ ನಿರ್ದೇಶಕರು ಉತ್ತರ ನೀಡದೇ ಸುಮ್ಮನಿದ್ದರು. ಸಿ.ಎಫ್.ಟಿ.ಆರ್.ಐ ನಿರ್ದೇಶಕರಿಂದ ಸರ್ವಾಧಿಕಾರಿ ಧೋರಣೆ ನಡೆಯುತ್ತಿದೆ, ಇವರು ಕನ್ನಡ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಹರಿಹಾಯ್ದರು. ಕನ್ನಡ ಪ್ರಾಧಿಕಾರದ ಅಧ್ಯಕ್ಷರಿಗೆ ನಾಡಿನ ಹಿರಿಯ ಸಾಹಿತಿ ಡಾ. ಸಿ.ಪಿ.ಕೆ ಸೇರಿದಂತೆ ಇತರ ಸಾಹಿತಿಗಳು ಈ ವೇಳೆ ಉಪಸ್ಥಿತರಿದ್ದರು.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ