2 ದಿನಗಳ ನಂತರ ಪತ್ತೆಯಾದ ಬಾಲಕನ ಶವ !

Kannada News

04-07-2017

ಹುಬ್ಬಳ್ಳಿ: ಈಜಲು ಹೋಗಿದ್ದ ಬಾಲಕ ನೀರಿನಲ್ಲಿ ಮುಳಗಿದ ಎರಡು ದಿನದ ನಂತರ, ಶವ ನೀರಿನ ಮೇಲೆ ತೇಲುತ್ತಿರುವುದು ಪತ್ತೆಯಾಗಿದೆ. ಜುಲೈ ೨ ರಂದು ಹುಬ್ಬಳ್ಳಿ ತಾಲ್ಲೂಕಿನ ಪಾಳ ಗ್ರಾಮದ, ಕಲ್ಲಿನ ಕ್ವಾರಿಯಲ್ಲಿ ಈಜಲು ಬಂದಿದ್ದ ಬಾಲಕ, ವಿದ್ಯಾಸಾಗರ ಹನಮಕ್ಕನವರ್ (೧೪) ನೀರಿನಲ್ಲಿ ಮುಳಗಿದ ಸಾವನ್ನಪ್ಪಿದ್ದನು. ಆದರೆ ಬಾಲಕ ನೀರಿನಲ್ಲಿ ಮುಳುಗಿ ಎರಡು ದಿನಗಳು ಕಳೆದ ನಂತರ ಮೃತದೇಹ ಪತ್ತೆಯಾಗಿದೆ.‌ ಎರಡು ದಿನಗಳಿಂದಲೂ ಅಗ್ನಿಶಾಮಕ  ದಳದ ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಅಲ್ಲದೇ ಕ್ವಾರಿಯ ನೀರು ಸ್ವಚ್ಚಗೊಳಿಸಲು ಜಿಲ್ಲಾಡಳಿತವು ‌ಕಾರವಾರದ ಸೀಬರ್ಡ್ ನೌಕಾನೆಲೆಯ ಸಿಬ್ಬಂದಿಯನ್ನು ಕರೆಸಿ ಸ್ವಚ್ಛ ಕಾರ್ಯ ಮುಂದುವರೆಸಿತ್ತು, ನಿನ್ನೆ ತಡ ರಾತ್ರಿಯಾಗಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಇಂದು ಮತ್ತೆ ಶೋಧ ಕಾರ್ಯ ನಡೆಸುತ್ತಿದ್ದಾಗ ಶವ ಪತ್ತೆಯಾಗಿದೆ. ಮೂಲತ ಛಬ್ಬಿ ಗ್ರಾಮದ ಬಾಲಕ ವಿದ್ಯಾಸಾಗರ ಆತನ‌ ಸ್ನೇಹಿತರು ಸೈಕಲ್ ಏರಿ ಪಾಳ ಗ್ರಾಮದ ಕಲ್ಲು ಕ್ವಾರಿಯಲ್ಲಿ ಈಜಲು ಬಂದಿದ್ದಾಗ ಈ ದುರ್ಘಟನೆ ನಡೆದಿತ್ತು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ