ಟೆಂಪೋಗೆ ಕ್ರೂಸರ್ ಡಿಕ್ಕಿ ಇಬ್ಬರ ಸಾವು !

Kannada News

04-07-2017

ಕೋಲಾರ: ಕೆಟ್ಟು ನಿಂತಿದ್ದ ಟೆಂಪೋಗೆ ಕ್ರೂಸರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಘಟನೆಯಲ್ಲಿ ಓರ್ವನಿಗೆ ಗಂಭೀರ‌ ಗಾಯಗಳಾಗಿವೆ. ಕೋಲಾರ ತಾಲ್ಲೂಕು ರಾಷ್ಟ್ರೀಯ ಹೆದ್ದಾರಿ 75 ರ ಕೆಂದಟ್ಟಿ ಬಳಿ ಘಟನೆ ನಡೆದಿದೆ. ಕೆಟ್ಟು ನಿಂತಿದ್ದ, ಮೀನು ತುಂಬಿದ ಟೆಂಪೋ, ರಿಪೇರಿ ಮಾಡುತ್ತಿದ್ದ, ಆಂಧ್ರಪ್ರದೇಶದ ಪಲಮನೇರು ಮೂಲದ ಸೋಮಶೇಖರ್ (28), ಕೋಲಾರ ತಾಲ್ಲೂಕಿನ ಚಿಕ್ಕಹಸಾಳ ಗ್ರಾಮದ ನಿವಾಸಿ ಚರಣ್ (30) ಮೃತರು, ಗಂಭೀರ ಗಾಯಗೊಂಡ ನಾಗೇಶ್ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದೂ ಚಿಕಿತ್ಸೆ ಪಡೆಯುತ್ತಿದ್ದಾನೆ. ಸ್ಥಳಕ್ಕೆ ಕೋಲಾರ ಗ್ರಾಮಾಂತರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ