ಅಪಘಾತಕ್ಕೆ ಭಿಕ್ಷುಕಿ ಬಲಿ !

Kannada News

04-07-2017

ಕೊಪ್ಪಳ: ರಸ್ತೆ ದಾಟುವಾಗ ಭಿಕ್ಷುಕಿಯೊಬ್ಬಳಿಗೆ ವಾಹನ ಡಿಕ್ಕಿಯಾದ ಪರಿಣಾಮ, ಭಿಕ್ಷುಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡದಿದೆ. ಕೊಪ್ಪಳದ ಹಾಲುವರ್ತಿ ಬಳಿಯ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ  ಈ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಭಿಕ್ಷುಕಿ ಮೃತದೇಹ ಅಪ್ಪಚ್ಚಿಯಾಗಿದೆ. ಮೃತದೇಹ ಗುರುತು ಸಿಗಲಾರದಷ್ಟು ನುಜ್ಜುಗುಜ್ಜಾಗಿದೆ. ಘಟನೆಗೆ ಚಾಲಕನ ವೇಗವೇ ಕಾರಣ ಎಂದು ಹೇಳಲಾಗುತ್ತಿದೆ. ಅಪಘಾತದ ನಂತರ ವಾಹನದೊಂದಿಗೆ ಚಾಲಕ ಪರಾರಿಯಾಗಿದ್ದಾನೆ. ಇನ್ನು ಘಟನಾ ಸ್ಥಳಕ್ಕೆ ಕೊಪ್ಪಳ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 


ಸಂಬಂಧಿತ ಟ್ಯಾಗ್ಗಳು

ಕೊಪ್ಪಳ ಅಪಘಾತಕ್ಕೆ ಭಿಕ್ಷುಕಿ ಬಲಿ !


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ