ದರ್ಪತೋರಿದ ಶಾಸಕನ ಮೇಲೆ ದೂರು !

Kannada News

04-07-2017

ಮಂಡ್ಯ: ಶಾಸಕರೊಬ್ಬರು ತಮ್ಮ ಅಧಿಕಾರ ಮತ್ತು ಬಲ ಪ್ರಯೋಗದಿಂದ, ಸರ್ಕಾರಿ ಸೇವೆಯಲ್ಲಿರುವ ರೆವಿನ್ಯೂ ಇನ್ಸ್ ಪೆಕ್ಟರ್ ಒಬ್ಬರನ್ನು ಜಾತಿ ನಿಂದನೆ, ಅವಾಚ್ಯ ಶಬ್ದಗಳ ಬಳಕೆ ಮತ್ತು ಸೊಂಟದ ಕೆಳಗಿನ ಭಾಷೆಗಳ ಬಳಸಿ, ಜೀವ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ. ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರಮೇಶ್ ಬಂಡಿಸಿದ್ದೇಗೌಡ ಈ ಕೃತ್ಯ ಎಸಗಿದ್ದೂ ಅಲ್ಲದೇ ರೆವಿನ್ಯೂ ಇನ್ಸ್ ಪೆಕ್ಟರ್ ಕರ್ತವ್ಯಕ್ಕೂ ಅಡ್ಡಿಪಡಿಸಿದ್ದಾರೆ. ಜೆಡಿಎಸ್ ಪಕ್ಷದಿಂದ ಅಮಾನತ್ತಾಗಿರುವ ರಮೇಶ್ ಬಂಡಿಸಿದ್ದೇಗೌಡ, ಆರ್.ಐ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಿಸೋದಾಗಿ, ಚಪ್ಪಲಿಯಲ್ಲಿ ಹೊಡೆದು, ಮುಗಿಸುವುದಾಗಿ, ದೂರವಾಣಿ ಮೂಲಕ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಶ್ರೀರಂಗಪಟ್ಟಣ ಕಸಬಾದ ರೆವಿನ್ಯೂ ಇನ್ಸ್ ಪೆಕ್ಟರ್, ಕೋಟಿ ದೊಡ್ಡಯ್ಯ ಎಂಬುವವರ ಮೇಲೆ ಶಾಸಕ ಈ ದುರ್ವರ್ತನೆ ಮತ್ತು ದರ್ಪ ತೋರಿದ್ದಾರೆ. ಈ ಕುರಿತು ನೊಂದ ರೆವಿನ್ಯೂ ಇನ್ಸ್ ಪೆಕ್ಟರ್, ಕೋಟಿ ದೊಡ್ಡಯ್ಯ ಪೊಲೀಸರಿಗೆ ದೂರು ನೀಡಿದ್ದೂ, ತಮ್ಮ ದೂರಿನಲ್ಲಿ ಶಾಸಕ ಮತ್ತು ಆತನ ಬೆಂಬಲಿಗರಿಂದ ನಿರಂತರ ದೌರ್ಜನ್ಯ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಮಾಡಿ, ಮಂಡ್ಯ ಎಸ್.ಪಿ ಗೆ ದೂರು ಸಲ್ಲಿಸಿದ್ದಾರೆ. ಇಷ್ಟೇ ಅಲ್ಲದೇ ರಾಜ್ಯಪಾಲರು, ಸಿಎಂ, ಲೋಕಾಯುಕ್ತ, ವಿಧಾನ ಸಭಾ ಸ್ಪೀಕರ್ ಗೂ ದೂರು ನೀಡಿದ್ದಾರೆ. ಆರೋಪಿಯ ವಿರುದ್ಧ ಶೀಘ್ರ ಕ್ರಮಕೈಗೊಳ್ಳಬೇಕೆಂದು ತಮ್ಮ ದೂರಿನಲ್ಲಿ ಮನವಿ ಮಾಡಿದ್ದಾರೆ, ಹಾಗೂ ಜೀವ ಭಯ ಇರುವ ತನಗೆ ರಕ್ಷಣೆ ನೀಡುವಂತೆ ಕೋರಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ