ಕಾಂಗ್ರೆಸ್ ಮೇಲೆ ಹದ್ದಿನ ಕಣ್ಣಿಟ್ಟಿರುವ ಬಿಜೆಪಿ !

Kannada News

04-07-2017

ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯವನ್ನು ಮೂಡಿಸಿ ಆ ಮೂಲಕ ಅಧಿಕಾರದ ಗದ್ದುಗೆಯನ್ನು ಏರುವುದು ಒಂದು ವಿಷಯವಾದರೆ, ರಾಜಕೀಯ ವಿರೋಧಿಗಳನ್ನು ಕುತಂತ್ರಗಳಿಂದ ಸದೆ ಬಡಿದು ಅವರನ್ನು ನಿರ್ವೀರ್ಯರನ್ನಾಗಿ ಮಾಡಿ ಅವರನ್ನು ಚುನಾವಣಾರಂಗದಲ್ಲಿ ಸೋಲುವ ಸ್ಥಿತಿಗೆ ತರುವುದು ಅಥವಾ ಮಣಿಸುವುದು ಭಾರತದ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಸಾಮಾನ್ಯವಾಗಿಬಿಟ್ಟಿದೆ.

ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂಬ ಕನಸು ಹೊತ್ತುಕೊಂಡು ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ, ಈಗ ಅದು ಅಷ್ಟೊಂದು ಸುಲಭವಲ್ಲ ಎಂದು ಮನಗಂಡ ಬೆನ್ನಲ್ಲೇ ಕಾಂಗ್ರೆಸ್ಸಿನ ಬೆನ್ನು ಮೂಳೆಯನ್ನೇ ಮುರಿಯಲು ಹೊರಟಂತಿದೆ. ಕರ್ನಾಟಕ ಕಾಂಗ್ರೆಸ್ ಆಳ್ವಿಕೆಯಲ್ಲಿರುವ ಒಂದೇ ದೊಡ್ಡ ರಾಜ್ಯ ಎಂಬ ವಿಚಾರವನ್ನು ಸಹಿಸದ ಬಿಜೆಪಿ ಹೇಗಾದರೂ ಮಾಡಿ ಮುಂದಿನ ಚುನಾವಣೆಯಲ್ಲಿ ಕರ್ನಾಟಕವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕೆಂದು ಶತಾಯಗತಾಯ ಪ್ರಯತ್ನ ಮಾಡುತ್ತಿದೆ. ಆ ಪ್ರಯತ್ನದ ಭಾಗವಾಗಿ ಈಗಾಗಲೇ ಅನೇಕ ಕಾಂಗ್ರೆಸ್ ಕಟ್ಟಾಳುಗಳ ಮೇಲೆ ತೆರಿಗೆ ದಾಳಿ, ತನಿಖೆಗಳನ್ನು ಮಾಡಿಸಿರುವ ಕೇಂದ್ರ ಸರ್ಕಾರ, ಕಾಂಗ್ರೆಸ್ಸಿನಲ್ಲಿ ಒಂದಷ್ಟು ಸಂಪನ್ಮೂಲ ಕ್ರೋಡೀಕರಿಸುವ ವ್ಯಕ್ತಿಗಳಂತಿರುವ ಡಾ ಮಹದೇವಪ್ಪ, ಕೆ ಜೆ ಜಾರ್ಜ್, ಎಂ ಬಿ ಪಾಟೀಲ್, ಡಿ ಕೆ ಶಿವಕುಮಾರ್ ಮುಂತಾದವರ ಮೇಲೆ ತೀವ್ರ ನಿಗಾ ಇಟ್ಟಿದೆ ಎಂದು ಹೇಳಲಾಗುತ್ತಿದೆ. ಈ ನಾಯಕರುಗಳ ಆಪ್ತರು ಹೇಳುವಂತೆ ಈಗಾಗಲೇ ಅವರ ಫೋನ್ ಗಳ ಕದ್ದಾಲಿಕೆ ನಡೆಯುತ್ತಿದೆ, ಅವರ ವ್ಯವಹಾರಗಳ ಮೇಲೆ ಕಣ್ಣಿಡಲಾಗಿದೆ ಮತ್ತು ಯಾವುದೇ ರೀತಿಯಲ್ಲೂ ಅವರಿಗೆ ನಗದು ಸಿಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಮುಂದಿನ ಚುನಾವಣೆಗೆ ರಾಜಾರೋಷವಾಗಿ ಎಲ್ಲ ರೀತಿಯಲ್ಲಿ ಬಿಜೆಪಿ ತಯಾರಿ ನಡೆಸುತ್ತಿರುವ ಸಮಯದಲ್ಲಿ ಕಾಂಗ್ರೆಸ್ ಹಣವಿಲ್ಲದೆ ಕಂಗಾಲಾಗುತ್ತಿದೆ. ಇನ್ನೊಂದು ಕಡೆ ಕಾಂಗ್ರೆಸ್ಸಿನಲ್ಲಿ ಈ ಅಘೋಷಿತ ಆರ್ಥಿಕ ತುರ್ತುಪರಿಸ್ಥಿತಿಯ ಕಾರಣದಿಂದಾಗಿ ಸರ್ಕಾರದ ಮಟ್ಟದಲ್ಲಿ ಭ್ರಷ್ಟಾಚಾರ ಎಕಾ ಏಕಿ ಕಡಿಮೆಯಾಗಿ ಬಿಟ್ಟಿದೆ ಎಂದೂ ಹೇಳಲಾಗುತ್ತಿದೆ.

https://ssl.gstatic.com/ui/v1/icons/mail/images/cleardot.gifಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ