ಟ್ರಕ್ ಟರ್ಮಿನಲ್‍ ಸಮಸ್ಯೆಗಳನ್ನು ಆಲಿಸಿದ ಕೆ.ಜೆ. ಜಾರ್ಜ್ !

Kannada News

03-07-2017

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಕೆ.ಜೆ. ಜಾರ್ಜ್ ಕಂಠೀರವ ಸ್ಟುಡಿಯೋ ಸಮೀಪದ ದೇವರಾಜ್ ಅರಸ್ ಟ್ರಕ್ ಟರ್ಮಿನಲ್‍ಗೆ ಭೇಟಿ ನೀಡಿ ಕುಂದುಕೊರತೆಗಳನ್ನು ಪರಿಶೀಲಿಸಿದರು. ಮಹಾನಗರ ಪಾಲಿಕೆಯ ಮೇಯರ್ ಜಿ. ಪದ್ಮಾವತಿ ಮತ್ತಿತರ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಸಚಿವರು  ಟ್ರಕ್ ಟರ್ಮಿನಲ್ ಉಪಯೋಗಿಸುವ ಸಿಬ್ಬಂದಿಗಳು ವಿವರಿಸಿದ ಸೌಕರ್ಯಗಳ ಕೊರತೆಯನ್ನು ಆಲಿಸಿದರು. ಟರ್ಮಿನಲ್ ಗೆ ಅಗತ್ಯವಿರುವ ವಾಹನ ಚಾಲಕರು ಹಾಗೂ ಇತರೇ ಸಿಬ್ಬಂದಿಗಳಿಗೆ ಕ್ಯಾಂಟೀನ್ ವ್ಯವಸ್ಥೆ, ಒಳಚರಂಡಿ ವ್ಯವಸ್ಥೆ, ರಸ್ತೆಗಳು, ವಿದ್ಯುತ್ ಕಂಬಗಳು ಮತ್ತು ವಿಶ್ರಾಂತಿ ಕಟ್ಟಡವನ್ನು ನಿರ್ಮಿಸಲು ಸೂಕ್ತ ವ್ಯವಸ್ಥೆ ಕೈಗೊಳ್ಳುವಂತೆ ಟ್ರಕ್ ಟರ್ಮಿನಲ್ ನ ವ್ಯವಸ್ಥಾಪಕ ನಿರ್ದೇಶಕ ಸಿ.ಮಲ್ಲಿಕಾರ್ಜುನಯ್ಯ ರವರಿಗೆ ಸಚಿವ ಕೆ.ಜೆ. ಜಾರ್ಜ್ ಆದೇಶಿಸಿದರು. ಕೆಟ್ಟುನಿಂತಿರುವ ಹಳೆಯ ವಾಹನಗಳು ಇತರೆ ಅನುಪಯುಕ್ತ ವಸ್ತುಗಳನ್ನು ಕೂಡಲೇ ತೆರವುಗೊಳಿಸುವಂತೆಯೂ ಸಹ ಸೂಚಿಸಿದರು. ಮೂಲಭೂತ ಸೌಕರ್ಯ ಕಾಮಗಾರಿಗಳನ್ನು ಟ್ರಕ್ ಟರ್ಮಿನಲ್‍ನ ಸಮೀಪದ ಪ್ರದೇಶದಲ್ಲಿ ಈಗಾಗಲೇ ನಗರೋತ್ತಾನ ಅಡಿಯಲ್ಲಿ ಕೈಗೊಳ್ಳಲಾಗಿದ್ದು ಟ್ರಕ್ ಟರ್ಮಿನಲ್‍ನ ಕಾಮಗಾರಿಗಳನ್ನು ಸಹ ಈ ಯೋಜನೆಯಡಿಯಲ್ಲಿ ಮುಂದುವರೆದ ಕಾಮಗಾರಿಗಳಾಗಿ ಪರಿಗಣಿಸಿ ಕೈಗೆತ್ತಿಕೊಂಡು ಆದಷ್ಟು ಶೀಘ್ರ ಪೂರ್ಣಗೊಳಿಸಬೇಕೆಂದು ಆದೇಶಿಸಿದರು. ಈ ಎಲ್ಲಾ ಕಾರ್ಯಗಳ ಅಭಿವೃದ್ಧಿ ಕುರಿತಂತೆ ಮುಂದಿನ ಭಾರಿ ಅನಿರೀಕ್ಷಿತವಾಗಿ ತಪಾಸಣೆಯನ್ನು ನಡೆಸಲಾಗುವುದೆಂದು ಸಹ ಮಾನ್ಯ ಸಚಿವರು ತಿಳಿಸಿದರು. ಸಚಿವರ ಭೇಟಿ ಸಂದರ್ಭದಲ್ಲಿ ಟ್ರಕ್ ಟರ್ಮಿನಲ್‍ನ ಅಧ್ಯಕ್ಷ ವಿ.ಎ.ಸೂರಿ, ಬಿ.ಬಿ.ಎಂ.ಪಿ.  ಆಯುಕ್ತ ಮಂಜುನಾಥ್ ಪ್ರಸಾದ್, ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಮತ್ತಿತರರು ಹಾಜರಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ