ಯುನಿವರ್ಸಲ್ ಹೆಲ್ತ್ ಕಾರ್ಡ್ ಗೆ ಆಧಾರ್ ಇದ್ದರೆ ಸಾಕು !

Kannada News

03-07-2017

ಬೆಂಗಳೂರು: ವಿಧಾನಸೌಧದಲ್ಲಿಂದು ಆರೋಗ್ಯ ಸಚಿವ ರಮೇಶ್ ಕುಮಾರ್  ಅವರು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ, ರಾಜ್ಯದಲ್ಲಿ ಸರ್ವರಿಗೂ ಆರೋಗ್ಯ ಭಾಗ್ಯದ ಕುರಿತು ಮಾತನಾಡಿದ ಅವರು ಇನ್ಮುಂದೆ  ರಾಜ್ಯದಲ್ಲಿ  ಯುನಿವರ್ಸಲ್ ಹೆಲ್ತ್ ಕಾರ್ಡ್ ಜಾರಿಗೆ ಬರಲಿದ್ದೂ, ರಾಜ್ಯದ 1 ಕೋಟಿ 30 ಲಕ್ಷ ಕುಟುಂಬಗಳು ಈ ಸೌಲಭ್ಯ ಪಡೆಯಲಿವೆ ಎಂದರು. ಈ ಯೋಜನೆಗೆ ಎಪಿಎಲ್, ಬಿಪಿಎಲ್ ಕಾರ್ಡ್ ಜೊತೆಗೆ ಸಂಬಂಧ ಇಲ್ಲ ಎಲ್ಲರಿಗೂ ಅನ್ವಯವಾಗುವಂತೆ ಯೋಜನೆ ರೂಪಿಸಲಾಗಿದ್ದೂ, ಫ್ರೀ ಟ್ರೀಟ್‌ಮೆಂಟ್, ಫ್ರಿ ಮೆಡಿಸಿನ್ ಗೆ ಯೋಜನೆಯೂ ಸಿದ್ದಪಡಿಸಲಾಗುತ್ತಿದೆ ಎಂದರು. ಯೂನಿವರ್ಸಲ್ ಹೆಲ್ತ್ ಕಾರ್ಡ್ ವಿತರಣೆ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಿದ್ದೂ, ಯೂನಿವರ್ಸಲ್ ಹೆಲ್ತ್ ಕಾರ್ಡ್ ಇರುವ ಎಲ್ಲರಿಗೂ ಉಚಿತ ಚಿಕಿತ್ಸೆ ಮತ್ತು ಔಷಧಿಗಳು ದೊರೆಯಲಿವೆ ಎಂದು ತಿಳಿಸಿದರು. ಎಪಿಎಲ್, ಬಿಪಿಎಲ್ ಕಾರ್ಡ್ ಇಲ್ಲದಿದ್ರೂ ಉಚಿತ ಚಿಕಿತ್ಸೆ ಮತ್ತು ಒಂದು ತಿಂಗಳಿಗೆ ಬೇಕಾಗುವಷ್ಟು ಔಷಧಿ ದೊರೆಯಲಿದ್ದೂ ಯೂನಿವರ್ಸಲ್ ಹೆಲ್ತ್ ಕಾರ್ಡ್ ಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿಸಿರಬೇಕು ಆಧಾರ್ ಕಾರ್ಡ್ ಹೊಂದಿರುವ ಎಲ್ಲರಿಗೂ ಉಚಿತ ಚಿಕಿತ್ಸೆ, ಔಷಧಿ ಸೌಲಭ್ಯಗಳು ದೊರೆಯಲಿವೆ, ಇಲ್ಲಿ ಬಡವ, ಶ್ರೀಮಂತ ಬೇಧ ಭಾವ ಇಲ್ಲದೇ ಯೂನಿವರ್ಸಲ್ ಹೆಲ್ತ್ ಕಾರ್ಡ್ ಮೂಲಕ ಚಿಕಿತ್ಸೆ ನೀಡಲಾಗುವುದು ಎಂದರು. ಅಲ್ಲದೇ ಪ್ರಮುಖವಾಗಿ  ಕರಾವಳಿ ಉಡುಪಿ ಭಾಗದ ಎಂಡೋಸಲ್ಫಾನ್ ಭಾದಿತರಿಗೆ ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡುವ ಬಗ್ಗೆ ಹಿಂದೆ ಸದನದಲ್ಲಿ ಚರ್ಚೆಯಾಗಿತ್ತು, ಕೇರಳ ಮಾದರಿಯಲ್ಲಿ ಕೆಲಸ ಮಾಡುವಂತೆ ಸದನದಲ್ಲಿ ಸಲಹೆಯೂ ಬಂದಿತ್ತು, ಕೇರಳದಲ್ಲಿ ಸಮಿತಿ ಅಸ್ತಿತ್ವದಲ್ಲಿದೆ, ಅದೇ ರೀತಿ ಇಲ್ಲಿಯೂ ಕೇರಳ ಮಾದರಿಯಲ್ಲಿ ಸಮಿತಿ ರಚನೆ ಮಾಡಲಿದ್ದೇವೆ ಎಂದು ತಿಳಿಸಿದ ಅವರು, ಎಂಡೋಸಲ್ಫಾನ್ ನಿಂದ ಸಂಪೂರ್ಣ ಹಾಸಿಗೆ ಇಡಿದವರಿಗೆ 3ಲಕ್ಷ ಪರಿಹಾರ ನೀಡಲಿದ್ದೇವೆ, ಮತ್ತು ಮೃತರ ಕುಟುಂಬಗಳಿಗೂ ಸೂಕ್ತ ಪರಿಹಾರ ನೀಡಲಾಗುವುದು ಹಾಗೂ ಎಂಡೋಸಲ್ಫಾನ್ ನಿಂದ ಕ್ಯಾನ್ಸರ್ ತೊಂದರೆಗೆ ಸಿಲುಕಿರುವವರಿಗೆ ಆರ್ಥಿಕ ಸಹಾಯ ಮಾಡಲಿದ್ದೇವೆ ಎಂದರು. ಇದರ ಸಲುವಾಗಿ ಸರ್ಕಾರಕ್ಕೆ 100ಕೋಟಿ ವರೆಗೂ ಖರ್ಚು ಬರುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಇವೆಲ್ಲದರ ಬಗ್ಗೆ ಸಿಎಂ ಅವರ ಗಮನಕ್ಕೆ ತಂದು ಶೀಘ್ರದಲ್ಲೇ ಉತ್ತಮ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ. ರಾಜ್ಯದಲ್ಲಿ ಒಟ್ಟು 6700ಜನ ಎಂಡೋಸಲ್ಫಾನ್ ಪೀಡಿತರಿದ್ದಾರೆ. ಇವರೆಲ್ಲರಿಗೆ ಪರಿಹಾರ ಧನದಿಂದ ಸರ್ಕಾರಕ್ಕೆ 100ಕೋಟಿ ರೂಪಾಯಿ ಹೊರೆಯಾಗಲಿದ್ದೂ, ಇದನ್ನು ಹಂತ ಹಂತವಾಗಿ ಈ ಸಮಸ್ಯೆ ಬಗೆಹರಿಸಿ, ಪರಿಹಾರ ನೀಡಲಾಗುವುದು ಎಂದು ತಿಳಿಸಿದರು. ಇನ್ನು ಖಾಸಗಿ ಆಸ್ಪತ್ರೆಗಳ ಮೇಲೆ ಹಿಡಿತ ಸಾಧಿಸಲು ಕಾಯ್ದೆ ಮಂಡನೆ ವಿಚಾರದ ಬಗ್ಗೆ ಮಾತನಾಡಿದ ಅವರು, ಈ ಕುರಿತು ಜುಲೈ 6ಕ್ಕೆ ಮೊದಲ ಸಭೆ ಇದ್ದೂ ಸದನದಲ್ಲಿ ಚರ್ಚೆ ಆದಾಗ 2 ವಾರ ಸಭೆ ಸಮಯಾವಕಾಶ ನೀಡಲಾಗಿದೆ, ತರಾತುರಿಯಲ್ಲಿ ಈ ಕಾಯ್ದೆ ತರೋದು ಬೇಡ ಎಂದು ಸದನದಲ್ಲಿ ಶಾಸಕರು ಹೇಳಿದ್ದೂ ಇದಕ್ಕೆ ಸಮ್ಮತಿಸಿದ್ದೇನೆ, ಈಗ ಚರ್ಚೆಗೆ ಅವಕಾಶ ಕೇಳಿದ್ದರಿಂದ ಹೆಚ್ಚಿನ ಚರ್ಚೆಯಾಗಲಿ ಎಂದು ಅವಕಾಶ ನೀಡಲಾಗಿದೆ. ಜನರಿಗೆ ಅನುಕೂಲ ಆಗಬೇಕು ಚರ್ಚೆಯ ಬಳಿಕ ಕಾಯ್ದೆ ಜಾರಿಗೆ ತರಲಾಗುವುದು ಎಂದಿದ್ದಾರೆ. ಅಲ್ಲದೇ ಮೈಸೂರಿನ ಡೆಂಘಿ ಪ್ರಕರಣಗಳ ಬಗ್ಗೆ ನನಗೆ ಬಹಳ ಬೇಸರ ಇದೆ. ಮೈಸೂರಿನಿಂದ ಕುರಿತು ಸರಿಯಾದ ಮಾಹಿತಿ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಬೆಂಗಳೂರಿನಲ್ಲೂ ಹೆಚ್ಚು ಡೆಂಘಿ ಕಾಡುತ್ತಿದೆ, ಮೈಸೂರು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕೂಡ ಡೆಂಘಿ ಪತ್ತೆಯಾಗಿದೆ, ಅಗತ್ಯ ಚಿಕಿತ್ಸೆಗೆ, ಬ್ಲಡ್ ಪ್ಲೇಟ್ಸ್ ಸಿದ್ಧತೆಗೂ ಅಣಿಯಾಗಿದ್ದೇವೆ, ಡೆಂಘಿ ನಿಯಂತ್ರಣಕ್ಕೆ ಸರ್ಕಾರ ಸಕಲ ಸಿದ್ಧತೆ ನಡೆಸಿದ್ದೇವೆ ಎಂದು ತಿಳಿಸಿದರು. ಅಷ್ಟೇ ಅಲ್ಲದೇ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ತಜ್ಞ ವೈದ್ಯರ ಕೊರತೆ ಇದೆ. ಕೊರತೆ ನೀಗಿಸಲು 1.25ಲಕ್ಷ ಸಂಬಳ ಕೊಟ್ಟರೂ ತಜ್ಞರು ಬರುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರದಿಂದ ವಿನೂತನ ಕಾರ್ಯಕ್ರಮ ಮಾಡಲಿದ್ದೂ. ಆನ್ ಲೈನ್ ಬಿಡ್ ಮೂಲಕ ತಜ್ಞ ವೈದ್ಯರನ್ನು ಪಡೆದು ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಿಗೆ ನೇಮಕ ಮಾಡಲಾಗುತ್ತದೆಂದು ಮಾಹಿತಿ ನೀಡಿದ್ದಾರೆ. ನಾಳೆಯಿಂದಲೇ ಸರ್ಕಾರ ಬಿಡ್ ಕರೆಯಲು ಸಿದ್ಧತೆ ನಡೆಸಲಿದೆ ಎಂದು. ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ