ವಾಹನಗಳ ಹೊಗೆಯಿಂದ ಮಳೆ ಪ್ರಮಾಣ ಕಡಿಮೆ !

Kannada News

03-07-2017

ಬೆಂಗಳೂರು: ದೇಶದಲ್ಲಿ ಮುಂಗಾರು ಕೊರತೆ ಕಾಣಿಸಿಕೊಳ್ಳಲು ಹಸಿರು ಮನೆ ಅನಿಲದ ದುಷ್ಪರಿಣಾಮಕ್ಕಿಂತ ವಾಹನಗಳ ಹೊಗೆ, ಅರೆ ಬೆಂದ ಧಾನ್ಯಗಳ ಹೊಗೆ, ಧೂಳು ಮತ್ತು ರಾಸಾಯನಿಕ ತ್ಯಾಜ್ಯಗಳೇ ಕಾರಣ ಎನ್ನುವುದು ಅಧ್ಯಯನದಿಂದ ಬೆಳಕಿಗೆ ಬಂದಿದೆ. ಹಸಿರು ಮನೆ ಅನಿಲಕ್ಕಿಂತ ವಾಹನಗಳು ಅರೆಬೆಂದ ತ್ಯಾಜ್ಯಗಳ ಮಾಲಿನ್ಯದಿಂದ ದಶಕಗಳಲ್ಲಿ ಮುಂಗಾರು ಪ್ರಮಾಣ ಇನ್ನಷ್ಟು ಕಡಿಮೆಯಾಗಲಿದೆ ಎಂದು ಎಚ್ಚರಿಕೆಯನ್ನು ಸಂಶೋಧನೆ ನಡೆಸಿದ ಹವಾಮಾನಶಾಸ್ತ್ರಜ್ಞ ಆರ್.ಕೃಷ್ಣನ್ ನೇತೃತ್ವದ ಪುಣೆಯ ಭಾರತೀಯ ಉಷ್ಣವಲಯದ ಹವಾಮಾನಶಾಸ್ತ್ರಜ್ಞ ಸಂಸ್ಥೆಯ ತಂಡ ನೀಡಿದೆ. ಹಸಿರು ಮನೆ ಅನಿಲ, ವಾಯು ಮಾಲಿನ್ಯ, ಅರಣ್ಯ ನಾಶ ಮತ್ತು ಕೃಷಿ ನಾಶಕ್ಕೆ ಮುಂಗಾರು ಮಳೆ ಕೊರತೆ ಉಂಟಾಗಲು ಕಾರಣವಾಗಲಿದೆ ಎಂದು ತಿಳಿಸಿದ್ದಾರೆ. ಸೂರ್ಯನ ಕಿರಣಗಳಿಂದ ಭೂಮಿಗೆ ಬರುವುದನ್ನು ಧೂಳುಮಯ ಮೋಡ ತಡೆಯುತ್ತದೆ. ಇದರಿಂದ ಸಮುದ್ರದ ಉಷ್ಣಾಂಶ ಮತ್ತು ಭೂಮಿಯ ತಾಪ ಹೆಚ್ಚಾಗುತ್ತದೆ. ಇದು ಮಳೆ ಕೊರತ ಉಂಟಾಗಲು ಕಾರಣವಾಗುತ್ತದೆ ಎಂದು ಅವರು ವ್ಯಾಖ್ಯಾನಿಸಿದ್ದಾರೆ.  ಕಳೆದ 50 ವರ್ಷಗಳಲ್ಲೇ ಇತ್ತೀಚೆಗೆ ಮುಂಗಾರು ದುರ್ಬಲಗೊಂಡಿದೆ, ಎಂದು ಕ್ಲೈಮೇಟ್ ಡೈನಾಮಿಕ್ಸ್ ಎಂಬ ಪತ್ರಿಕೆಯಲ್ಲಿ 2015 ರಲ್ಲೇ ಕೃಷ್ಣನ್ ಬರೆದಿದ್ದರು. ಗಣಿತದ ಮಾದರಿ ಮತ್ತು ಕಂಪ್ಯೂಟರ್ ಸಹಾಯದಿಂದ ಈ ಫಲಿತಾಂಶವನ್ನು ಕಂಡುಕೊಳ್ಳಲಾಗಿದೆ. ಹೊಸ ಕಂಪ್ಯೂಟರ್ ಮಾದರಿಗಳಲ್ಲಿ ಹಸಿರು ಅನಿಲಕ್ಕಿಂತ ವಾಹನಗಳ ಹೊಗೆ, ರಾಸಾಯನಿಕ ತ್ಯಾಜ್ಯದಿಂದ ಉಂಟಾಗುವ ಅನಿಲ ಹೆಚ್ಚು ಶಕ್ತಿಯುತವಾಗಿದ್ದು, ಇದು ಮುಂಗಾರು ಮಳೆಯ ಕೊರತೆಗೆ ಕಾರಣವಾಗಿರುವುದು ಕಂಡುಬಂದಿದೆ ಎಂದು, ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಭಾರತೀಯ ವಿಜ್ಞಾನಗಳ ಅಕಾಡಮಿ ಸಭೆಯಲ್ಲಿ ಕೃಷ್ಣನ್ ಹೇಳಿದ್ದಾರೆ. ವಿಜ್ಞಾನಿಗಳು ಮತ್ತು ಅವರ ತಂಡ ಹವಾಮಾನ ಮುನ್ಸೂಚನೆಗೆ ಹೊಸ ವಿಧಾನವನ್ನು ಬಳಸಿದೆ. ಈ ಹೊಸ ವಿಧಾನವನ್ನು ಈ ವರ್ಷದಿಂದ ಭಾರತೀಯ ಹವಾಮಾನ ಇಲಾಖೆ ಬಳಸಲು ಆರಂಭಿಸಿದೆ. ಈ ಮಾದರಿ ಪ್ರಥಮವಾಗಿ ಭಾರತದಲ್ಲೇ ತಯಾರಿಸಿರುವ ಮಾದರಿಯಾಗಿದೆ ಎಂದೂ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ