ಸಾಲದ ಸುಳಿಗೆ ಇಡೀ ಕುಟುಂಬ ಆತ್ಮ ಹತ್ಯೆ !

Kannada News

03-07-2017

ಬೆಂಗಳೂರು: ಸಾಲದ ಸುಳಿಗೆ ಸಿಕ್ಕ ಕುಟುಂಬವೊಂದು, ತಂದೆ-ತಾಯಿ ಇಬ್ಬರು ಗಂಡುಮಕ್ಕಳಿದ್ದ ಇಡೀ ಕುಟುಂಬ ನೇಣಿಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಹೊಂಗಸಂದ್ರದಲ್ಲಿ ನಡೆದಿದೆ. ಹೊಂಗಸಂದ್ರದಲ್ಲಿ ವರ್ಕ್‍ಶಾಪ್ ನಡೆಸುತ್ತಿದ್ದ ಜಗದೀಶ್(45)ಅವರ ಪತ್ನಿ ಕಸ್ತೂರಿ(44)ಪುತ್ರರಾದ ವಿನೋದ್ ಮತ್ತು ಬಾಲಚಂದ್ರ ನಿನ್ನೆ ಮಧ್ಯಾಹ್ನ ಮನೆಯಲ್ಲಿ ಒಟ್ಟಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜೆಯಾದರೂ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಅನುಮಾನಗೊಂಡ ಸಂಬಂಧಿಕರು ಕಿಟಕಿ ಒಡೆದು ನೋಡಿದಾಗ ಕುಟುಂಬ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ತಮಿಳುನಾಡು ಮೂಲದ ಮೃತ ಜಗದೀಶ್. ಸುಮಾರು 20 ವರ್ಷಗಳಿಂದ ನಗರದಲ್ಲಿ ನಲೆಸಿದ್ದಾರೆ. ಕಷ್ಟಪಟ್ಟು ದುಡಿದು ಸ್ವಂತ ಮನೆ ಮಾಡಿಕೊಂಡಿದ್ದು ಜೀವನೋಪಾಯಕ್ಕೆ ವರ್ಕ್ ಶಾಪ್ ಇಟ್ಟುಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ವ್ಯವಹಾರದಲ್ಲಿ ನಷ್ಟ ಉಂಟಾಗಿ ಸಾಲದ ಸುಳಿಗೆ ಸಿಲುಕಿದ್ದರು. ಜೊತೆಗೆ ತಮ್ಮ ಮನೆಯಲ್ಲಿ ಬೋಗ್ಯಕ್ಕೆ ಬಾಡಿಗೆ ಇದ್ದ ಇಬ್ಬರು ಬಾಡಿಗೆದಾರರಿಗೆ ಇದೇ ತಿಂಗಳು 7 ಲಕ್ಷ ರೂ. ಹಣ ನೀಡಬೇಕಿತ್ತು. ಸಾಲದ ಸುಳಿಯಲ್ಲಿ ಸುಲುಕಿದ್ದ ಜಗದೀಶ್ ಗೆ ಸಾಲದ ಹಣ ಮತ್ತು ಬೋಗ್ಯದ ಹಣ ನೀಡಲಾಗದ ಹಿನ್ನೆಲೆಯಲ್ಲಿ ನೇಣಿಗೆ ಶರಣಾಗಿರುವ ಅನುಮಾನ ವ್ಯಕ್ತವಾಗಿದೆ. ಬೊಮ್ಮನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ