ಚುಡಾಯಿಸಿದ್ದವನ ಬಂಧನಕ್ಕೆ ನೆರವಾಯಿತು ಫೇಸ್ ಬುಕ್ !

Kannada News

03-07-2017

ಮಂಗಳೂರು: ತನ್ನನ್ನು ಹಿಂಬಾಲಿಸಿ ಚುಡಾಯಿಸಿದ ಯುವಕನೊಬ್ಬನ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದು ಬಿಸಿ ಮುಟ್ಟಿಸಿದ್ದ ಮಂಗಳೂರಿನ ಯುವತಿಗೆ ಕೊನೆಗೂ ಗೆಲುವು ದಕ್ಕಿದೆ. ಯುವತಿಯ ಫೇಸ್ ಬುಕ್ ಪೋಸ್ಟ್ ಗಮನಿಸಿದ ಮಂಗಳೂರು ಪೊಲೀಸರು ಆತನ ಮೇಲೆ ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದಾರೆ. ಚುಡಾಯಿಸಲು ಹಿಂಬಾಲಿಸುತ್ತಿದ್ದ ಯುವಕನ ದುರ್ನಡತೆಯ ಬಗ್ಗೆ  ರಶ್ಮಿ ಶೆಟ್ಟಿ ಎನ್ನುವ ಯುವತಿ ಸಾಮಾಜಿಕ ಜಾಲ ತಾಣದ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿ ಮಾನ ಹರಾಜು ಹಾಕಿದ್ದಳು. ರಶ್ಮಿ ಶೆಟ್ಟಿ ಎಂಬುವರು ಜೂನ್ 25ರಂದು ಮಂಗಳೂರಿನ ಅಲೋಶಿಯಸ್ ಕಾಲೇಜಿನ ಬಳಿಯಿಂದ ಬಲ್ಮಠವರೆಗೆ ನಡೆದುಕೊಂಡು ಹೋಗುತ್ತಿದ್ದಾಗ ರಶ್ಮಿ ಹಿಂದೆಯೇ ಆ್ಯಕ್ಟಿವಾದಲ್ಲಿ ಬಂದ ಯುವಕನೊಬ್ಬ ಹಾರ್ನ್‌ ಮಾಡಿ ಆಕೆಯನ್ನೇ ದಿಟ್ಟಿಸಿ ನೋಡುತ್ತಿದ್ದ. ಇದು ಪದೇ ಪದೇ ಮುಂದುವರಿದಾಗ ಆಕೆ ಆತನ ಸ್ಕೂಟರ್‌ನ ಫೊಟೋ ತೆಗೆದಿದ್ದಳು. ಬಳಿಕ ಅದರಲ್ಲಿದ್ದ ನೋಂದಣಿ ಸಂಖ್ಯೆ ಆಧಾರದಲ್ಲಿ ಸ್ಕೂಟರ್‌ನ ಮಾಲೀಕತ್ವದ ವಿವರಗಳನ್ನು ಶೋಧಿಸಿ ಫೇಸ್ ಬುಕ್ ನಲ್ಲಿ ಹಾಕಿದ್ದಳು. ರಿಜ್ವಾನ್ ಅಹಮ್ಮದ್ ಎಂಬಾತನ ಸ್ಕೂಟರ್ ಅದಾಗಿದ್ದು, ವಾಹನ ಚಲಾಯಿಸುತ್ತಿದ್ದದ್ದು ಯಾರು ಎಂಬುದು ತಿಳಿದಿಲ್ಲ. ಜೊತೆಗೆ ಈಕೆಯ ಪೋಸ್ಟನ್ನು ಲೈಕ್ ಮಾಡಿದ್ದಲ್ಲದೆ, ಮಂಗಳೂರು ಪೊಲೀಸ್ ಕಮಿಷನರ್ ವಿಳಾಸವನ್ನೂ ಮಿತ್ರರು ಟ್ಯಾಗ್ ಮಾಡಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ಪೊಲೀಸರೇ ಮಹಿಳಾ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಘಟನೆಗೆ ಸಂಬಂಧಿಸಿ  ರಿಜ್ವಾನ್ ಅಹಮ್ಮದ್ ನನ್ನು ಬಂದಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ