ಉತ್ತರ ಕರ್ನಾಟಕಕ್ಕೂ ಬೇಕು ಚಿತ್ರ ನಗರಿ..?

Kannada News

03-07-2017

ಧಾರವಾಡ: ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಶಂಕರ ಸುಗತೆ ಇಂದು ಸುದ್ದಿಗೋಷ್ಠಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೈಸೂರು ಬಳಿ ಚಿತ್ರ ನಗರಿ ಮಾಡುತ್ತಿರುವ ಸರ್ಕಾರ ಉತ್ತರ ಕರ್ನಾಟಕ ಭಾಗದಲ್ಲಿಯೂ ಚಿತ್ರ ನಗರಿ ಮಾಡಬೇಕು ಎಂದು ಇಲ್ಲಿ ಒತ್ತಾಯಿಸಿದ್ದಾರೆ. ಅಲ್ಲದೇ ಈ ಹಿಂದೆಯೂ ನಾವು ಮನವಿ ಮಾಡಿಕೊಂಡರೂ, ಮುಖ್ಯಮಂತ್ರಿ ತಮ್ಮೂರಿಗೆ ಚಿತ್ರ ನಗರಿ ತೆಗೆದುಕೊಂಡು ಹೋಗಿದ್ದಾರೆ ಎಂದು ವ್ಯಂಗವಾಡಿದ್ದಾರೆ. ಈ ಕುರಿತು ನಮಗೂ ನ್ಯಾಯ ದೊರಕಿಸಿಕೊಡುವಂತೆ ಪುನಃ ಮನವಿ ಮಾಡಿಕೊಂಡಿದ್ದೇವೆ, ಮನವಿಗೆ ಸ್ಪಂದಿಸಿ ಉತ್ತರ ಕರ್ನಾಟಕಕ್ಕೆ ಚಿತ್ರ ನಗರಿ ಕೊಡದೇ ಹೋದಲ್ಲಿ ಉತ್ತರ ಕರ್ನಾಟಕ ಭಾಗದ ಸಿನಿಮಾ ಕಲಾವಿದರೆಲ್ಲಾ ಸೇರಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ