ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಲು ಯೋಗಿ ವಿಫಲ !

Kannada News

03-07-2017

ನವದೆಹಲಿ: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್  ಅವರ ಬಿಜೆಪಿ ನೇತೃತ್ವದ ಸರ್ಕಾರ ಮೊನ್ನೆಯಷ್ಟೇ 100 ದಿನಗಳ ಆಡಳಿತದ ಸಂಭ್ರಮಾಚರಣೆ ಆಚರಸಿಕೊಂಡಿತ್ತು, ಇನ್ನು ಈ ಗುಂಗಿನಲ್ಲಿರುವ ಸರ್ಕಾರಕ್ಕೆ ಬಿಜೆಪಿ ಮೈತ್ರಿಯ ಸಚಿವರೊಬ್ಬರು ಬಿಸಿ ಮುಟ್ಟಿಸಿದ್ದಾರೆ, ಯೋಗಿ ಅವರ ಸರ್ಕಾರದ ಭ್ರಷ್ಟಾಚಾರ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲಾಗಿದೆ ಎಂದು ಆರೋಪಿಸಿ ಈ ವಿರುಧ್ಧ ಧರಣಿ ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರಾದ  ಓಂ ಪ್ರಕಾಶ್ ರಾಜ್ಭಾರ್ ಅವರು ಸರ್ಕಾರದ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ, ಮತ್ತು ಸರ್ಕಾರದ ವಿರುದ್ಧ ಹೋರಾಟ ನಡೆಸುವುದಾಗಿಯೂ ಎಚ್ಚರಿಸಿದ್ದಾರೆ. ಇಲ್ಲಿನ ಸಾರ್ವಜನಿಕ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸದೇ ಕಿವುಡರಾಗಿದ್ದಾರೆ ಎಂದು ಖಾರವಾಗಿ ನುಡಿದಿದ್ದಾರೆ, ಹೀಗೇ ಸರ್ಕಾರದ ಕಾರ್ಯ ವೈಖರಿ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮತ್ತೊಬ್ಬ ಸಚಿವರು ಭ್ರಷ್ಟಾಚಾರದ ಕುರಿತು ಎಚ್ಚರಿಸಿದ ಅವರು ತಮ್ಮ ಸ್ಥಾನ ದಿಂದ ಹೊರನಡೆಯುವುದಾಗಿಯೂ ಹೇಳಿರುವುದಾಗಿ ತಿಳಿದು ಬಂದಿದೆ. ಒಟ್ಟಾರೆ  ಸಮಗ್ರ ಬದಲಾವಣೆ ಮತ್ತು ಅಭಿವೃದ್ಧಿಯ ಮಂತ್ರ ಜಪಿಸುತ್ತ ಅಧಿಕಾರದ ಗದ್ದುಗೆಯನ್ನೇರಿದ ಉತ್ತರ ಪ್ರದೇಶದ ಸರ್ಕಾರದ ಕಾರ್ಯ ವೈಖರಿಗೆ ಸಚಿವರಿಂದಲೇ ಅಪಸ್ವರ ಎದ್ದಿರುವುದು, ಅಲ್ಲಿನ ಭ್ರಷ್ಟಾರದ ಮಟ್ಟ ಹೇಗಿರಬಹುದು ಮತ್ತು  ಸಾಮಾನ್ಯ ಜನರ ಅಳಲೇನು ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತಿದೆ.   ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ