ಕಂಬದ ಮೇಲೆ ಪ್ರಾಣ ಕಳೆದುಕೊಂಡ ಲೈನ್ ಮನ್ !

Kannada News

03-07-2017

ಹುಬ್ಬಳ್ಳಿ: ವಿದ್ಯುತ್ ಕಂಬವನ್ನೇರಿ ಕೆಲಸಮಾಡುತ್ತಿದ್ದ  ಲೈನ್ ಮನ್ ಗೆ ವಿದ್ಯುತ್ ಹರಿದು ಕಂಬದ ಮೇಲೆಯೇ ಸಾವನ್ನಪ್ಪಿರುವ ದಾರುಣ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಜಿಲ್ಲೆಯ, ಕುಂದಗೋಳ ತಾಲ್ಲೂಕಿನ ರಟ್ಟಿಗೇರಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದೂ, ಗುಡಿಗೇರಿ ಗ್ರಾಮದ ಅಲ್ತಾಫ್ ಅಂಗಡಿ (೨೧) ಮೃತ ಯುವಕ. ಈ ಯುವಕ ಹೆಸ್ಕಾಂನಲ್ಲಿ ಗುಡುಗೇರಿ ವಿಭಾಗದ ಲೈನ್ ಮನ್ ಆಗಿ ಕಳೆದ ೩ ತಿಂಗಳಿಂದ ಕೆಲಸ ಮಾಡುತ್ತಿದ್ದೂ. ರಟ್ಟಿಗೇರಿ ಗ್ರಾಮದಲ್ಲಿನ ವಿದ್ಯುತ್ ಸಂಪರ್ಕ ಕೈಕೊಟ್ಟಿದ್ದರಿಂದ, ವಿದ್ಯುತ್ ಸಂಪರ್ಕ ದುರಸ್ಥಿ ಮಾಡಲೆಂದು ಬಂದಿದ್ದರು. ಆದರೆ ಕಂಬವನ್ನು ಏರಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ವಿದ್ಯುತ್ ಪ್ರವಹಿಸಿ ಕಂಬದಲ್ಲಿಯೇ ಮೃತಪಟ್ಟಿದ್ದಾನೆ. ಈತನ ಜೊತೆ ಕೆಲಸಕ್ಕೆ ಬಂದವರು ವಿದ್ಯುತ್ ಶಾಕ್ ನಿಂದ ಅಲ್ತಾಫ್ ಮೃತಪಡುತ್ತಿದಂತೆ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಕಳೆದ ೪ ತಾಸಿಗಿಂತಲೂ ಹೆಚ್ಚು ಕಾಲ ಮೃತದೇಹ ಕಂಬದಲ್ಲಿಯೇ ಇದೆ.  ಹೆಸ್ಕಾಂನ ಅಧಿಕಾರಿಗಳಾಗಲಿ, ಪೊಲೀಸರಾಗಲಿ ಸ್ಥಳಕ್ಕೆ ಆಗಮಿಸಿಲ್ಲ. ಇದು ಗ್ತಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ‌. ಹೆಸ್ಕಾಂನ ನಿರ್ಲಕ್ಷದ‌ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಕೆಳಗೆ ಇಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಗುಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ