ವಿಮಾನದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ !

Kannada News

01-07-2017

ಬೆಂಗಳೂರು: ವಿಮಾನದಲ್ಲಿ ಪ್ರಯಾಣಿಸುವ ವೇಳೆ ಪಕ್ಕದಲ್ಲಿ ಕುಳಿತಿದ್ದ ಮಹಿಳೆಯ ಮೈಕೈ ಮುಟ್ಟಿ ಹಸ್ತಮೈಥುನ ಮಾಡುತ್ತಾ ಅಸಭ್ಯವಾಗಿ ವರ್ತಿಸಿದ್ದ ತಮಿಳುನಾಡು ಮೂಲದ ಉದ್ಯಮಿ ಸುಬಿನ್ ಹಂಸ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಬಂಧಿತ ಸುಬಿನ್ ಹಂಸನನ್ನು ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ. ಕಳೆದ 10 ದಿನಗಳ ಅವಧಿಯಲ್ಲಿ ವಿಮಾನದಲ್ಲಿ ಲೈಂಗಿಕ ದೌರ್ಜನ್ಯದ ಎರಡನೇ ಪ್ರಕರಣ ಇದಾಗಿದೆ. ಆರೋಪಿಯು ಕಳೆದ ಜೂ.27ರಂದು  ಬೆಂಗಳೂರಿನಿಂದ ಮುಂಬೈಗೆ ಹೊರಟಿದ್ದ ವಿಮಾನದಲ್ಲಿ, ನವ ಮುಂಬೈ ನಿವಾಸಿಯಾದ ಮಹಿಳೆ ಬೆಂಗಳೂರಿನಿಂದ ಮುಂಬೈಗೆ ಇಂಡಿಗೋ ವಿಮಾನದಲ್ಲಿ ಹೊರಟಿದ್ದಾರೆ. ಆರೋಪಿ ಸುಬಿನ್ ಹಂಸ ಮಹಿಳೆಯ ಪಕ್ಕದ ಸೀಟು ಸಿಕ್ಕಿದ್ದು ಮುಂಜಾನೆಯಾಗಿದ್ದರಿಂದ ಮಹಿಳೆ ವಿಮಾನ ಟೇಕಾಫ್ ಆಗುತ್ತಿದ್ದಂತೆಯೇ ನಿದ್ದೆಗೆ ಜಾರಿದ್ದಾರೆ. ಈ ವೇಳೆ ಆರೋಪಿ ಸುಬಿನ್ ದುಷ್ಟ ಬುದ್ಧಿಯನ್ನು ತೋರಿಸಿ ತಾನು ಮಲಗಿರುವಂತೆ ನಟಿಸಿ ಮಹಿಳೆಯ ಮೈಕೈ ಮುಟ್ಟಿದ್ದಾನೆ. ನಿದ್ದೆಯ ಮಂಪರಿನಲ್ಲಿ  ಹೀಗೆ ಮಾಡಿರಬಹುದು ಎಂದು ಮಹಿಳೆ ಭಾವಿಸಿದ್ದಾರೆ. ಸ್ವಲ್ಪ ಪಕ್ಕಕ್ಕೆ ಜರುಗಿ ಮತ್ತೆ ಮಹಿಳೆಯು ನಿದ್ದೆಗೆ ಜಾರಿದಾಗ ತನ್ನ ವಿಕೃತಿ ಮುಂದುವರೆಸಿದ ಸುಬೀನ್ ಹಂಸ ಹಸ್ತಮೈಥುನ ಮಾಡುತ್ತಿದ್ದ ಶಬ್ದ ಕೇಳಿ ಎಚ್ಚರಗೊಂಡ ಮಹಿಳೆಯು ಕೃತ್ಯವನ್ನು ಕಂಡು ತಕ್ಷಣವೇ ವಿಮಾನದ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಅವರು ಬರುವ ವೇಳೆಗೆ ಈತ ಪ್ಯಾಂಟ್ ಜಿಪ್ ಹಾಕುತ್ತಿದ್ದಿದ್ದನ್ನು ನೋಡಿದ್ದಾರೆ. ಆತನಿಗೆ ಎಚ್ಚರಿಕೆ ನೀಡಿ ಮಹಿಳೆಗೆ ಬೇರೆ ಸೀಟಿನ ವ್ಯವಸ್ಥೆ ಮಾಡಿ ಕೊಟ್ಟು ವಿಮಾನ ಮುಂಬೈನಲ್ಲಿ ಇಳಿಯುತ್ತಿದ್ದಂತೆಯೇ ವಿಮಾನದ ಸಿಬ್ಬಂದಿ ಆರೋಪಿಯನ್ನು ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಿದ್ದಾರೆ. ಸಿಐಎಸ್‍ಎಫ್ ಜೊತೆ ಸೇರಿ ಭದ್ರತಾ ಸಿಬ್ಬಂದಿ ಸುಬೀನ್ ಹಂಸನನ್ನು ಏರ್ ಪೋರ್ಟ್ ಪೊಲೀಸರಿಗೆ ಒಪ್ಪಿಸಿದ್ದು ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ. 10 ದಿನ ಹಿಂದೆ ಕಳೆದ ಜೂನ್ 19ರಂದು ದೆಹಲಿ ಮುಂಬೈ ಮಾರ್ಗದ ವಿಮಾನವೊಂದರಲ್ಲಿ ದೆಹಲಿ ಮೂಲದ ವಕೀಲೆಯ ಮೇಲೆ ಐಟಿ ಕಂಪೆನಿಯ ಸಿಬ್ಬಂದಿಯೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ್ದ. ಆತನನ್ನೂ ಸಿಐಎಸ್‍ಎಫ್ ಸಿಬ್ಬಂದಿ ಬಂಧಿಸಿದ್ದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ