ಶವದ ಮೇಲೆಯೇ ರೈಲುಗಳ ಒಡಾಟ !

Kannada News

01-07-2017

ಬೆಂಗಳೂರು: ಗೌರಿಬಿದನೂರಿನ ಹೊರವಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಯುವಕನ ಶವ ತೆರವುಗೊಳಿಸದ ಪರಿಣಾಮ ಶವದ ಮೇಲೆಯೇ ರೈಲು ಓಡಾಡಿದ ಘಟನೆ ನಡೆದಿದೆ. ಗೌರಿಬಿದನೂರು ತಾಲ್ಲೂಕಿನ ಆನಂದಪುರ ಗಂಗಾಧರ(30) ಶುಕ್ರವಾರ ಬೆಳಗ್ಗೆ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಧ್ಯಾಹ್ನದವರೆಗೂ ಇವರ ಶವವವನ್ನು ತೆರವುಗೊಳಿಸದ ಕಾರಣ ರೈಲುಗಳು ಶವದ ಮೇಲೆಯೇ ಓಡಾಡಿವೆ. ಗಂಗಾಧರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಬೆಳಗ್ಗೆ ಸುಮಾರು 11 ಗಂಟೆಗೆ ಗಂಗಾಧರ್ ಆತ್ಮಹತ್ಯೆ ಮಾಡಿಕೊಂಡಿದ್ದು, ರೈಲ್ವೆ ಸಿಬ್ಬಂದಿ ಮಾತ್ರ ಸಂಜೆ 4.30 ಗಂಟೆಯ ವೇಳೆಯಲ್ಲಿ ದೇಹವನ್ನು ರೈಲು ಹಳಿಯಿಂದ ತೆಗೆದಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೆ ಶವದ ಮೇಲೆಯೇ ಸುಮಾರು 10 ರಿಂದ 15 ರೈಲುಗಳು ಓಡಾಟ ನಡೆಸಿವೆ ಎಂದು ಸ್ಥಳೀಯರು ಹೇಳಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ