ಮಲಗಿದ್ದ ಮಗುವನ್ನು ನಿರ್ಲಕ್ಷ್ಯಸಿದ ಅಂಗನವಾಡಿ !

Kannada News

01-07-2017

ಬೆಂಗಳೂರು: ದೊಡ್ಡಬಳ್ಳಾಪುರದ ಬಳಿಯ ಮುಪ್ಪಡಿಘಟ್ಟದ ಅಂಗನವಾಡಿ ಕೇಂದ್ರದಲ್ಲಿ ನಿದ್ದೆ ಮಾಡಿದ್ದ ಮಗುವನ್ನು ಒಳಗೆ ಬಿಟ್ಟು ಬೀಗ ಹಾಕಿಕೊಂಡು ಹೋದ ಘಟನೆ ನಡೆದಿದೆ. ಮುಪ್ಪಡಿಘಟ್ಟ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಭಾಗೀರಥಿ ಶುಕ್ರವಾರ ಮಧ್ಯಾಹ್ನ ಅನಾರೋಗ್ಯ ನಿಮಿತ್ತ ಆಸ್ಪತ್ರೆಗೆ ಹೋಗಲು ಅಂಗನವಾಡಿಯಲ್ಲಿನ ಮಕ್ಕಳನ್ನು ಮನೆಗೆ ಕಳುಹಿಸಿದ್ದು ಮಲಗಿ ನಿದ್ರೆ ಮಾಡುತ್ತಿದ್ದ ಅಮೃತಾ(3) ಎಂಬ ಮಗುವನ್ನು ಅಲ್ಲಿಯೇ ಬಿಟ್ಟು ಮಗು ಎಚ್ಚರವಾದ ಮೇಲೆ ಮನೆಗೆ ಕಳುಹಿಸಿ ಬೀಗ ಹಾಕುವಂತೆ ಅಂಗನವಾಡಿ ಪಕ್ಕದಲ್ಲಿನ ಶಿಕ್ಷಕರಿಗೆ ಹೇಳಿ ಹೋಗಿದ್ದಾರೆ. ಆದರೆ  ಶಿಕ್ಷಕರು ಅಂಗನವಾಡಿ ಕೇಂದ್ರದಲ್ಲಿ ಮಲಗಿದ್ದ ಮಗುವನ್ನು ಗಮನಿಸದೆ ಬೀಗ ಹಾಕಿಕೊಂಡು ಹೋಗಿದ್ದಾರೆ. ಸಂಜೆಯಾದರೂ ಮಗು ಮನೆಗೆ ಬಾರದಿದ್ದರಿಂದ ಗಾಬರಿಗೊಂಡ ಅಮೃತಾ ಪೋಷಕರಾದ ಮಂಗಳ, ಆನಂದ್ ಇಡೀ ಗ್ರಾಮದಲ್ಲಿ ಹುಡುಕಾಡಿದ್ದಾರೆ. ನಂತರ ಅಂಗನವಾಡಿ ಸಮೀಪ ಬಂದು ನೋಡಿದಾಗ ಮಗು ಅಳುತ್ತಿರುವುದು ಕೇಳಿ ಬಂದಿದೆ. ನಂತರ ಅಂಗನವಾಡಿ ಕೇಂದ್ರದ ಬೀಗ ಒಡೆದು ಮಗುವನ್ನು ಹೊರಗೆ ತರಲಾಗಿದೆ. ಈ ಕುರಿತು ಮಾಹಿತಿ ಪಡೆದ ಶಿಶು ಅಭಿವೃದ್ದಿ ಕಲ್ಯಾಣ ಅಧಿಕಾರಿ, ನಿರ್ಲಕ್ಷ್ಯ ವಹಿಸಿ ಮಗುವನ್ನು ಅಂಗನವಾಡಿ ಕೇಂದ್ರದಲ್ಲಿ ಬಿಟ್ಟು ಹೋಗಿರುವ ಕ್ರಮ ಖಂಡನೀಯ. ನಿರ್ಲಕ್ಷ್ಯವಹಿಸಿರುವ ಅಂಗನವಾಡಿ ಕಾರ್ಯಕರ್ತೆ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಶಿಶು ಅಭಿವೃದ್ದಿ ಕಲ್ಯಾಣ ಅಧಿಕಾರಿ ಜಯಲಕ್ಷ್ಮಿ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ