ತಾಂತ್ರಿಕ ದೋಷ ಮೆಟ್ರೋ 15 ನಿಮಿಷ ಸ್ಥಗಿತ !

Kannada News

01-07-2017

ಬೆಂಗಳೂರು: ತಾಂತ್ರಿಕ ದೋಷ ಕಂಡುಬಂದ ಪರಿಣಾಮ ಮೆಜೆಸ್ಟಿಕ್‍ನಲ್ಲಿನ ಕೆಂಪೇಗೌಡ ಮೆಟ್ರೋ ರೈಲು ನಿಲ್ದಾಣದಲ್ಲಿ 15 ನಿಮಿಷ ಕಾಲ ರೈಲನ್ನು ನಿಲ್ಲಿಸಿ ಪರಿಶೀಲನೆ ನಡೆಸಲಾಯಿತು. ಬೈಯಪ್ಪನಹಳ್ಳಿ ಕಡೆಯಿಂದ ಮೈಸೂರು ರಸ್ತೆಗೆ ಹೊರಟಿದ್ದ ನೇರಳೆ ಮಾರ್ಗದ ಮೆಟ್ರೋ ರೈಲಿನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ರೈಲಿನ ಎರಡು ಬಾಗಿಲುಗಳು ತೆರೆಯಲಿಲ್ಲ. ಇದರಿಂದಾಗಿ ಆ ನಿಲ್ದಾಣದಲ್ಲಿ ಇಳಿಯಬೇಕಿದ್ದ ಪ್ರಯಾಣಿಕರು ಪರದಾಡುವಂತಾಯಿತು. ವಿಧಾನಸೌಧದ ಡಾ.ಬಿ.ಆರ್.ಅಂಬೇಡ್ಕರ್ ನಿಲ್ದಾಣದಲ್ಲೂ 120 ಸಂಖ್ಯೆಯ ಮೆಟ್ರೋ ರೈಲಿನಲ್ಲಿ ತಾಂತ್ರಿಕ ತೊಂದರೆ ಕಂಡುಬಂದು ಇದೇ ರೀತಿಯ ತೊಂದರೆ ಎದುರಾಯಿತು. ಹೀಗಾಗಿ ವಿಶ್ವೇಶ್ವರಯ್ಯ ನಿಲ್ದಾಣ ಹಾಗೂ ವಿಧಾನಸೌಧ ನಿಲ್ದಾಣದಲ್ಲಿ ಇಳಿಯಬೇಕಿದ್ದ ಪ್ರಯಾಣಿಕರು ಇಳಿಯದಿದ್ದರೂ ಮೆಟ್ರೋ ರೈಲು ಮುಂದೆ ಚಲಿಸಿತು. ರೈಲಿನ ತಾಂತ್ರಿಕ ತೊಂದರೆಯಿಂದ ಪ್ರಯಾಣಿಕರು ಮೆಜೆಸ್ಟಿಕ್‍ವರೆಗೂ ಪ್ರಯಾಣಿಸಬೇಕಾಯಿತು. ಬಳಿಕ ಮೆಜೆಸ್ಟಿಕ್ ನಿಲ್ದಾಣದಲ್ಲಿ ರೈಲಿನ ತಾಂತ್ರಿಕ ದೋಷದ ಕುರಿತು ತಪಾಸಣೆ ನಡೆಸಿ ದೋಷ ಸರಿಪಡಿಸಲಾಯಿತು. ಇದರಿಂದಾಗಿ ಮೆಟ್ರೋ ರೈಲು 15 ನಿಮಿಷ ತಡವಾಗಿ ಪ್ರಯಾಣ ಮುಂದುವರೆಸಬೇಕಾಯಿತು.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ