ತ್ರಿವಳಿ ತಲಾಖ್ ಸಾಮಾಜಿಕ ಸಮಸ್ಯೆ !

Kannada News

01-07-2017

ನವದೆಹಲಿ: ತಮ್ಮ ಹಕ್ಕುಗಳನ್ನು ಪಡೆಯಲು ಮುಸ್ಲಿಂ ಮಹಿಳೆಯರು ಮುಂದೆ ಬರಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರೆ ನೀಡಿದ್ದಾರೆ. ತ್ರಿವಳಿ ತಲಾಖ್ ಎಂಬುದು ಸಾಮಾಜಿಕ ಸಮಸ್ಯೆಯಾಗಿದ್ದು, ಮುಸ್ಲಿಂ ಸಮುದಾಯ ಈ ಸಮಸ್ಯೆಯನ್ನು ಬಗೆಹರಿಸಿಕೊಂಡರೇ ಬಹಳ ಉತ್ತಮ ಎಂದಿದ್ದಾರೆ. ಖಾಸಗಿ ಚಾನೆಲ್ ವೊಂದರ ಸಂದರ್ಶನವೊಂದರಲ್ಲಿ ಮಾತನಾಡಿರುವ ಯೋಗಿ ಆದಿತ್ಯನಾಥ್, ಮಹಿಳೆ ಮತ್ತು ಪುರುಷರ ಅನುಪಾತದಲ್ಲಿ ಭಾರಿ ವ್ಯತ್ಯಾಸವಿದ್ದು, ಲಿಂಗ ಅನುಪಾತ ಕಡಿಮೆಯಾಗಬೇಕು ಎಂದು ಅಭಿಪ್ರಾಯಪಟ್ಟರು. ಅಲ್ಲದೇ ಕೇಂದ್ರ ವಕ್ಫ್ ಮಂಡಳಿಗೆ ಕೆಲವೊಂದು ಶಿಫಾರಸ್ಸು ಮಾಡಿದ್ದು, ಅವುಗಳು ಅನುಷ್ಠಾನಗೊಳ್ಳಬೇಕಾಗಿದೆ ಎಂದಿದ್ದಾರೆ. ಇನ್ನು ಗೋ ರಕ್ಷಕರ ಹೆಸರಿನಲ್ಲಿ ಕಾನೂನನ್ನ ಕೈ ಎತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ತಮ್ಮ 100 ದಿನಗಳ ಸರ್ಕಾರದ ಆಡಳಿತದಲ್ಲಿ ತೃಪ್ತಿ ಕಂಡಿದ್ದು, ಸಮಾಜದ ಎಲ್ಲಾ ವರ್ಗಗಳ ಅಭಿವೃದ್ಧಿಗಾಗಿ ಯಾವುದೇ ತಾರತಮ್ಯ ಮಾಡದೇ ಶ್ರಮಿಸುವುದಾಗಿ ಅವರು ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ