ಅಜಂಖಾನ್ ವಿರುದ್ಧ ದೇಶದ್ರೋಹ ಪ್ರಕರಣ !

Kannada News

01-07-2017

ನವದೆಹಲಿ: ಭಾರತೀಯ ಸೇನೆ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂಖಾನ್ ವಿರುದ್ಧ ಉತ್ತರ ಪ್ರದೇಶದ ಬಿಜನೋರ್ ನ ಚಾಂದ್ ಪುರ್ ಪೊಲೀಸ್ ಸ್ಟೇಷನ್ ನಲ್ಲಿ ದೇಶದ್ರೋಹ ಪ್ರಕರಣ ದಾಖಲಾಗಿದೆ. ಇನ್ನು, ಇದಲ್ಲದೇ, ರಾಮ್ ಪುರ, ಹಜ್ರತ್ ಗಂಜ್ ಠಾಣೆಗಳಲ್ಲೂ ಅಜಂಖಾನ್ ವಿರುದ್ಧ ಪ್ರಕರಣ ದಾಖಲಾಗಿದೆ. ಅಂದಹಾಗೇ, ಕಾನ್ಪುರದ ಸಭೆಯೊಂದರಲ್ಲಿ ಮಾತನಾಡಿದ್ದ ಅಜಂಖಾನ್ ಅವರು, ಯೋಧರ ತಲೆ, ಕೈ, ಕಾಲುಗಳನ್ನು ಕತ್ತರಿಸುವುದು ಸಾಮಾನ್ಯ. ಗಡಿಯಲ್ಲಿ ಈ ರೀತಿಯ ಹೋರಾಟವಾಗುತ್ತಿರುವುದು ಸಾಮಾನ್ಯ. ಆದರೆ, ಇತ್ತೀಚೆಗೆ ಮಹಿಳಾ ಉಗ್ರರು ಯೋಧರ ಜನನಾಂಗವನ್ನು ಕತ್ತರಿಸುತ್ತಿದ್ದಾರೆ.  ಈ ರೀತಿಯ ಹತ್ಯೆ ಮಾಡುವುದರ ಹಿಂದೆಯೂ ಪ್ರಮುಖವಾದ ಕಾರಣಗಳಿವೆ. ಗಡಿಯಲ್ಲಿ ಯೋಧನ ಮರ್ಮಾಂಗವನ್ನು ಕತ್ತರಿಸಲಾಗಿದೆ. ಯಾವುದರಿಂದ ಮಹಿಳೆಯರಿಗೆ ತೊಂದರೆ ಆಗುತ್ತಿದೆಯೋ ಅದನ್ನು ಕತ್ತರಿಸುತ್ತಿದ್ದಾರೆ. ಭಾರತಕ್ಕೆ ನಾಚಿಕೆಯಾಗಬೇಕು. ವಿಶ್ವವನ್ನು ಭಾರತ ಯಾವ ಮುಖದಿಂದ ನೋಡುತ್ತದೆ ಎಂದು ಆರೋಪಿಸುವ ಮೂಲಕ ಯೋಧರು ಅತ್ಯಾಚಾರಿಗಳು ಎಂದು ದೂಷಿಸಿದ್ದರು. ಇದೀಗ ಈ ಕುರಿತು ಪ್ರಕರಣ ದಾಖಲಾಗಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ