ಯಡ್ಡಿಗೆ ಸವಾಲೆಸೆದ ಎಂ.ಬಿ ಪಾಟೀಲ್ !

Kannada News

01-07-2017

ಎಂ.ಬಿ ಪಾಟಿಲ್ ಅವರ ಬಗ್ಗೆ ಯಡಿಯೂರಪ್ಪ ನವರು ಅಗಾಗ ಗಂಭೀರ ಆರೋಪಗಳನ್ನು ಮಾಡುತ್ತಿದ್ದ ಹಿನ್ನೆಲೆಯಲ್ಲಿ ಇಂದು ಮಾತನಾಡಿದ ಎಂ.ಬಿ ಪಾಟಿಲ್ ಅವರು, ಅದಕ್ಕೆಲ್ಲ ಧೀರ್ಘವಾಗಿ ಉತ್ತರಿಸಿದ್ದಾರೆ. ಮತ್ತು ಇನ್ನೊಮ್ಮೆ ಆರೋಪ ಮಾಡಿದರೆ ನಾನು ವೈಯಕ್ತಿಕವಾಗಿ ಮಾತನಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ. ಯಡಿಯೂರಪ್ಪ ಮೊನ್ನೆ ವಿಜಯಪುರಕ್ಕೆ ಬಂದಾಗ ನನ್ನ ಮತಕ್ಷೇತ್ರಕ್ಕೆ ಬಂದಾಗ ಬಹಿರಂಗ ಸಭೆಯಲ್ಲಿ ಮಾತನಾಡಿರುವುದು ಅವರ ಕರ್ತವ್ಯ, ಸರಕಾರದ ಅವ್ಯವಹಾರ ಬೆಳಕಿಗೆ ತರಬೇಕು ಅದನ್ನು ಬಿಟ್ಟು, ಅವರು ನನ್ನ ಮೇಲೆ ಆರೋಪ ಮಾಡಿದಾಗ ನಾನು ಉತ್ತರ ಕೊಟ್ಟಿದ್ದೆನೆ, ಅವರು ಹಿರಿಯರು ನಮ್ಮ ಸಮಾಜದ ನಾಯಕ, ಹಾಗೂ ವಯಸ್ಸಿನಲ್ಲಿಯೂ ಹಿರಿಯರು, ಗೌರವ ಕೊಡುವ ಸಂಸ್ಕೃತಿ, ಚಾರಿತ್ರೆ, ಹಿನ್ನೆಲೆ ಅವರಿಗೆ ಇಲ್ಲ, ಮಾದೇಗೌಡರು ಮಾತನಾಡಿದಾಗ ಸಹಿಸಿಕೊಂಡ ನಾನು ಇವರು ಮಾತನಾಡಿದಾಗಲು ನಾನು ಸಹಿಸಿಕೊಂಡಿದ್ದೆ, ಆದ್ರೆ ಈಗ ಮತ್ತೆ ನನ್ನ ಬಗ್ಗೆ ಮಾತನಾಡುತ್ತಿರುವುದನ್ನು ನಾನು ಒಪ್ಪಲ್ಲ, ನಮ್ಮ ಆಡಳಿತದಲ್ಲಿ ಭ್ರಷ್ಟಾಚಾರ ಆಗಿದ್ದರೆ ದಾಖಲೆ ಬಿಡುಗಡೆ ಮಾಡಿ, ಅವರು ವಯಸ್ಸಿನಲ್ಲಿ ಹಿರಿಯರು ಯೋಚನೆಗಳಲ್ಲಿ ಹಿರಿಯರಲ್ಲ ಎಂದು ಕುಟುಕಿದರು. ಅಧಿಕಾರಕ್ಕೆ ನೀವು ಬರಲ್ಲ, ಬಂದ್ರೆ ೨೪ ಗಂಟೆಗಳಲ್ಲಿ ತನಿಖೆ ಮಾಡುತ್ತಿನಿ ಎನ್ನುವವರು, ಚುಣಾವಣೆ ವರ್ಷ ಇದೇ ನಿಮಗೆ ಸಹಾಯವಾಗುತ್ತೆ ಬಿಡುಗಡೆ ಮಾಡಿ, ಚಿಲ್ಲರೆ ಹೇಳಿಕೆ ನಿಮಗೆ ಒಳ್ಳೆಯದಲ್ಲ ಎಂದರು. ಐದು ವರ್ಷ ನಿಮ್ಮ ಸರಕಾರದಲ್ಲಿ ಸ್ವತ: ನೀವೇ ಶ್ರೀಕೃಷ್ಣನ ಆಸ್ಥಾನಕ್ಕೆ ಹೋಗಿ ಬಂದಿದ್ದೀರಿ, ಜೈಲಿಗೆ ಹೋಗಿ ಬಂದ ಪ್ರಥಮ ಮುಖ್ಯಮಂತ್ರಿ ನೀವು, ನಮ್ಮ ಸಮಾಜದ ಹಿರಿಯರು ಜೈಲಿಗೆ ಹೋಗಿ ಬಂದಿದ್ದು ನಮಗೆ ಖೇದ ಅನಿಸುತ್ತದೆ, ನಿಮ್ಮ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಿ ಎಂದು ನೀರಾವರಿ ಸಚಿವ ಎಂ.ಬಿ.ಪಾಟೀಲ್, ಯಡಿಯೂರಪ್ಪ ಅವರಿಗೆ ಸವಾಲು ಹಾಕಿದ್ದಾರೆ. ಗುಂಡ್ಲುಪೇಟೆ ಚುಣಾವಣೆಯಲ್ಲಿ ನಾವು ಗೆದ್ದ ಮೇಲೆ ಯಡಿಯೂರಪ್ಪ ನವರಿಗೆ ಹೊಟ್ಟೆಉರಿ. ಅಕ್ಕಮಹಾದೇವಿ ಹೆಸರನ್ನು ಮಹಿಳಾ ವಿ.ವಿ ಗೆ ಇಟ್ಟಿದ್ದೂ ಹೊಟ್ಟೆಉರಿ, ಮೂರನೆಯದು ಬಸವೇಶ್ವರ ಪೋಟೊ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಹಾಕಿದ್ದು ಅವರಿಗೆ ತಾಳರಾದಷ್ಟು ಹೊಟ್ಟೆಉರಿ ತಂದಿದೆ ಎಂದಿದ್ದಾರೆ, ಅವರು ಇಲ್ಲಿಗೆ ಬಂದ ದಿನ ಕೂಡಲಸಂಗಮದಲ್ಲಿ ನಮ್ಮ ಕಾರ್ಯಕ್ರಮಕ್ಕೆ ೨ ಲಕ್ಷ ಜನ ಸೇರಿದ್ದರು ಅದಕ್ಕಾಗಿ ಇವರಿಗೆ ಹತಾಶೆ ಆಗಿದೆ, ಅದಕ್ಕಾಗಿ ಸುಖಾ ಸುಮ್ಮನೆ ಮಾತನಾಡುತ್ತಿದ್ದಾರೆ ಎಂದರು, ನಾನು ಯಡಿಯೂಪ್ಪನವರಿಗೆ ಇನ್ನೊಂದು ಹೊಟ್ಟೆಉರಿ ಪ್ರಾರಂಭಿಸುತ್ತೇನೆ, ಬಸವೇಶ್ವರ ಮ್ಯೂಸಿಯಂ ಮಾಡಿ ತೋರಿಸುತ್ತೇನೆ ಎಂದು ಖಡಕ್ಕಾಗಿ ನುಡಿದಿದ್ದಾರೆ. ನಾನು ಕಿರಿಯನಾಗಿ ರಾಜಕೀಯದಲ್ಲಿ ಬೆಳೆಯುತ್ತಿರುವವನು, ನೀವು ಹಿರಿಯರು ಅಂದುಕೊಂಡಿದ್ದೆ ನೀವು ಕೇವಲ ವಯಸ್ಸಿನಲ್ಲಿ ಮಾತ್ರ ಹಿರಿಯರು ಎಂದು ವ್ಯಂಗವಾಡಿದರು. ನಾನು ನಮ್ಮ ತಂದೆಯಿಂದ ಸಂಸ್ಕೃತಿ ಕಲಿತಿದ್ದೇನೆ, ವೈಯಕ್ತಿಕವಾಗಿ ಮಾತನಾಡುವುದು ದೊಡ್ಡ ಪರಿಣಾಮ ಬೀರುತ್ತದೆ, ನಿಮ್ಮ ವೈಯಕ್ತಿಕ ಜೀವನ, ಹಾಗೂ ರಾಜಕೀಯದ ಬಗ್ಗೆ ಮಾತನಾಡಲು ನಮಗೂ ಬರುತ್ತೆ, ನೀವು ಹಿರಿಯರಿದ್ದೀರಾ ಎಂದು ಸುಮ್ಮನಿದ್ದೇನೆ, ಎಂದು ಗಂಭೀರವಾಗಿ ನುಡಿದಿದ್ದಾರೆ. ಈ ಲೂಸ್ ಟಂಗ್ ಬದಲಾಯಿಸಿಕೊಳ್ಳದಿದ್ದರೆ, ಮೂರನೆ ಬಾರಿ ನೀವು ಮಾತನಾಡಿದರೆ, ಅದರ ಮುಂದಿನ ಬಗ್ಗೆ ನೀವೇ ತಿಳಿದುಕೊಳ್ಳಿ ಎಂದರು. ಯಡಿಯೂರಪ್ಪ ಅಧಿಕಾರಕ್ಕೆ ಬರುವ ಮುನ್ನ ಸಾಲಮನ್ನಾ ಮಾಡುತ್ತೇವೆ ಎಂದಿದ್ದರು, ಆದ್ರೆ ಅಧಿಕಾರಕ್ಕೆ ಬಂದ ಮೇಲೆ ಮಾಡಲಿಲ್ಲ, ಈಗ ನಾವು ಮಾಡಿದ್ದೇವೆ ಮೋದಿ ಅವರ ಕೀವಿ ಹಿಂಡಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲಮನ್ನಾ ಮಾಡಿ, ವೆಂಕಯ್ಯ ನಾಯ್ಡು ಅವರು ಸಾಲಮನ್ನಾವನ್ನು ಫ್ಯಾಷನ್ ಅಂತಾರೆ ? ನಮ್ಮ ಪಕ್ಷ ಚರ್ಚಿಸಿದ್ದೆವೆ, ರಾಷ್ಟ್ರೀಕೃತ ಬ್ಯಾಂಕನಲ್ಲಿನ ಸಾಲಮನ್ನಾ ಮಾಡಲು ದೇಶ್ಯಾದ್ಯಂತ ಚಳುವಳಿ ಮಾಡುತ್ತೆವೆ ಎಂದರು,  ಜಿಎಸ್ ಟಿ ನಮ್ಮ ಸರಕಾರದ್ದು, ಮೋದಿ ಸರಕಾರ ಪ್ರಚಾರದ ಸರಕಾರ ಎಂದು ಕೇಂದ್ರ ಸರ್ಕಾರದ ಬಗ್ಗೆಯೂ ವಾಗ್ದಾಳಿ ನಡೆಸಿದ್ದಾರೆ. ಎರಡು ಬಾರಿ ಸಹಿಸಿಕೊಂಡಿದ್ದೇನೆ, ಮೂರನೆ ಬಾರಿ ಆದ್ರೆ ನಾನು ಬೆಂಗಳೂರಿನಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಏನು ಮಾತನಾಡುತ್ತೆನೋ ಗೊತ್ತಿಲ್ಲ, ವೈಯಕ್ತಿಕವಾಗಿ ಮಾತನಾಡಬಹುದು ಎಂದು ಎಂ.ಬಿ ಪಾಟಿಲ್ ಎಚ್ಚರಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ