ಸಿಕ್ಕಿಬಿದ್ದ ಕೊಲೆಪಾತಕರು !

Kannada News

01-07-2017

ಬಳ್ಳಾರಿ: ಬಳ್ಳಾರಿಯ ರೌಡಿಶೀಟರ್ ಬಂಡಿ ರಮೇಶ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯ ಪ್ರಮುಖ ರೋಪಿಗಳನ್ನು ಬಂಧಿಸಲಾಗಿದೆ. ಜಿಲ್ಲೆಯ ಗ್ರಾಮೀಣ ಪೊಲೀಸರು ಕಾರ್ಯಾಚರಣೆ ನೆಡಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆಯ ಪ್ರಮುಖ ಅರೋಪಿಗಳಾದ ಜಗ್ಗ ಮತ್ತು ಮಾರೆಣ್ಣ ಸೇರಿದಂತೆ ಹತ್ತು ಜನರನ್ನು ಬಂಧಿಸಿದ್ದಾರೆ. ಕಳೆದ ತಿಂಗಳು ೨೨ರಂದು ರೌಡಿಶೀಟರ್ ಬಂಡಿ ರಮೇಶನನ್ನು ಕೊಲೆ ಮಾಡಲಾಗಿತ್ತು. ಬಳ್ಳಾರಿಯ ಗುಗ್ಗರಹಟ್ಟಿಯ ಸಾಯಿಪವನ್ ಡಾಬಾದಲ್ಲಿ  ಹತ್ಯೆ ಮಾಡಿದ್ದರು. ಪ್ರಕರಣದ ತನಿಖೆ ಆರಂಭಿಸಿದ್ದ ಪೊಲೀಸರು 10 ಜನ ಸೇರಿದಂತೆ, ಮೂವರು ಮಹಿಳೆಯರನ್ನು ಬಂಧಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ