2019ಕ್ಕೆ ರಾಹುಲ್ ಗಾಂಧಿ ಪ್ರಧಾನಿ ಆಗಲಿದ್ದಾರೆ..?

Kannada News

30-06-2017 218

ಬೆಳಗಾವಿ: ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶನ್ನು ಉದ್ದೇಶಿಸಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡಿದ್ದಾರೆ. ಒಂದು ಲಕ್ಷ ಕ್ಕೂ ಹೆಚ್ಚು ಕೈ ಕಾರ್ಯಕರ್ತರನ್ನ ಉದ್ದೇಶಿಸಿ ಭಾಷಣ‌ ಮಾಡಿದರು. ಮುಂದಿನ ವಿಧಾನಸಭಾ ಚುನಾವಣೆ ದೃಷ್ಠಿಯಿಂದ ಈ ಸಮಾವೇಶ ಏರ್ಪಡಿಸಿದ್ದೂ. 2018ರ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನವನ್ನ ಕಾಂಗ್ರೆಸ್ ಗೆಲ್ಲಲಿದೆ. ಬೆಳಗಾವಿ ಜಿಲ್ಲೆಯ ಅತಿ ಹೆಚ್ಚು ಅಂದ್ರೆ ೧೮ ಸ್ಥಾನಗಳಿವೆ, ಆದರೆ ಕಳೆದ ಬಾರಿಗೆ ಕೇವಲ 6 ಸ್ಥಾನ ಗೆದ್ದಿದ್ದೆವು. ಬೆಳಗಾವಿ ಜಿಲ್ಲೆಯ ಎಲ್ಲ ನಾಯಕರು ಒಗ್ಗಟ್ಟಾಗಿ ಶ್ರಮಿಸಿದರೆ ೧೨ ರಿಂದ ೧೫ ಸ್ಥಾನ ಗೆಲ್ಲಲು ಸಾಧ್ಯವಿದೆ. ಕಾಂಗ್ರೆಸ್ ವಿಜಯಯಾತ್ರೆ ಬೆಳಗಾವಿಯಿಂದ ಆಗಬೇಕು ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ. 2019ಕ್ಕೆ ಕೇಂದ್ರದಲ್ಲಿ ರಾಹುಲ್ ಗಾಂಧಿ ಪ್ರಧಾನಿ ಆಗಲಿದ್ದಾರೆ ಎಂದರು. ಅಭಿಮಾನವನ್ನು ಉಳಿಸಿಕೊಳ್ಳುವ ಕೆಲಸ ಕಾಂಗ್ರೆಸ್ ಆಡಳಿತ ಮಾಡಿದೆ,‌ ನಮ್ಮ ಸರ್ಕಾರದ ಆಡಳಿತ ಜನರಿಗೆ ಸಮಾಧಾನ ತಂದಿದೆ. ಕರ್ನಾಟಕದಲ್ಲಿ ನುಡಿದಂತೆ ನಡೆದ ಸರ್ಕಾರ. ಬಿಜೆಪಿಯವರಿಗೆ ಹೆದರಿ ಸಾಲಮನ್ನಾ ಮಾಡಿಲ್ಲ. ಯಡಿಯೂರಪ್ಪ ಅವರಂತಹ ಸಾವಿರ ಜನ ಬಂದರೂ ಹೆದರುವುದಿಲ್ಲ. ಬಿಜೆಪಿ ರಾಜ್ಯ ಮುಖಂಡರು ಕೇಂದ್ರ ಸರ್ಕಾರದಿಂದ ಸಾಲಮನ್ನಾ ಮಾಡುವಂತೆ ಒತ್ತಡ ಹಾಕಲಿ. ಕೇಂದ್ರ ಸಾಲಮನ್ನಾ ಮಾಡುವಂತೆ ಹೇಳಿದರೆ ರಾಜ್ಯ ಬಿಜೆಪಿ ಮುಖಂಡರು ತುಟಿ ಬಿಚ್ಚಲಿಲ್ಲ. ಮೋದಿ ಮುಂದೆ ಮಾತನಾಡದ ನೀವು ಹೇಡಿಗಳು ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಅಲ್ಲದೇ ಬಿಜೆಪಿ ಕೋಮುವಾದಿ ಪಕ್ಷ ಎಂದರು. ಮುಸಲ್ಮಾನ, ಕ್ರಿಶ್ಚಿಯನ್ ಬೇಡ ಅನ್ನುವ ಬಿಜೆಪಿ ಸಬಕಾ ಸಾಥ್ ಸಬಕಾ ವಿಕಾಸ್ ಎಂಬ ಡೋಂಗಿ ಪದ ಹೇಳುವ ಮೋದಿ, ಆದರೆ ನುಡಿದಂತೆ ನಡೆದ ಸರ್ಕಾರ ಕಾಂಗ್ರೆಸ್ ಸರ್ಕಾರ. ಮೂರು ವರ್ಷದ ಸಾಧನೆ ಬಗ್ಗೆ ಬಹಿರಂಗ ಚರ್ಚೆಗೆ ನಾವು ಸಿದ್ದರಿದ್ದೇವೆ ಎಂದರು. ಯಡಿಯೂರಪ್ಪ ಜೈಲಿಗೆ ಹೋಗಿ ಬಂದ ಮಂತ್ರಿ. ಬ್ರಷ್ಟಾಚಾರದ ಹಣವನ್ನು ಚೆಕ್ ಮೂಲಕ ಪಡೆದ ಯಡಿಯೂರಪ್ಪ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಬಿಜೆಪಿ ಬೇಡ ಎಂದರು.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ