ಶವಗಾರಲ್ಲೇ ಪತ್ನಿ ಶವವನ್ನು ಬಿಟ್ಟು ಪರಾರಿ !

Kannada News

30-06-2017

ಬೆಂಗಳೂರು: ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿಯೋರ್ವಳು ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿ, ಚಿಕಿತ್ಸೆ ಫಲಿಸದೆ ಸಾವನ್ನಪಿರುವ ಘಟನೆ ದೇವನಹಳ್ಳಿಯಲ್ಲಿ ನಡೆದಿದೆ. ದೇವನಹಳ್ಳಿಯ ಶಾಂತಿನಗರ ನಿವಾಸಿ ವನಜಾಕ್ಷಿ (26) ಮೃತಪಟ್ಟವರು, ಮಧ್ಯರಾತ್ರಿ ಗೃಹಿಣಿ ವನಜಾಕ್ಷಿ ಮನೆಯಲ್ಲಿನ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಈ ವೇಳೆ ಗಮನಿಸಿದ ಪತಿ ಶಿವರಾಜ್ ಕೂಡಲೆ ಆಕೆಯನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾನೆ. ಈ ವೇಳೆಗಾಗಲೇ ವನಜಾಕ್ಷಿ ಮೃತಪಟ್ಟಿದ್ದು ಪತ್ನಿಯ ಮೃತ ದೇಹವನ್ನು ದೇವನಹಳ್ಳಿಯ ಖಾಸಗಿ ಆಸ್ಪತ್ರೆ ಶವಗಾರದಲ್ಲೆ ಬಿಟ್ಟು ಪತಿ ಪರಾರಿಯಾಗಿದ್ದಾನೆ. ವನಜಾಕ್ಷಿ 9 ತಿಂಗಳ ಹಿಂದಷ್ಟೇ ಶಿವರಾಜ್‍ನನ್ನು ವಿವಾಹವಾಗಿದ್ದರು. ದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ