ಪೊಲೀಸ್ ಠಾಣೆಯಲ್ಲಿಯೇ ವಿವಾಹವಾದ ಜೋಡಿ !

Kannada News

30-06-2017 469

ಬೆಂಗಳೂರು: ಮೂರು ವರ್ಷದಿಂದ ಪ್ರೀತಿಸುತ್ತಿದ್ದವರ ವಿವಾಹಕ್ಕೆ ಎರಡು ಮನೆಯವರಿಂದ ವಿರೋಧವಾದ ಹಿನ್ನೆಲೆಯಲ್ಲಿ ಈ ಜೋಡಿ ಪೊಲೀಸ್ ಠಾಣೆಯನ್ನೇ ಆಶ್ರಯಿಸಿ ಪೊಲೀಸರ ಸಮ್ಮುಖದಲ್ಲಿ ವಿವಾಹವಾದ ಘಟನೆ ನಗರದ ಹೊರವಲಯದ ಅಕ್ಕೂರಲ್ಲಿ ನಡೆದಿದೆ. ಠಾಣೆಯಲ್ಲಿಯೇ ನ್ಯಾಯ ಕೇಳಿ ವಿವಾಹವಾದವರು ಶಿಲ್ಪ (19) ಹಾಗೂ ರಾಜು (29) ಯಲಚಿಪಾಳ್ಯದ ಚನ್ನಯ್ಯ ಎಂಬುವರ ಮಗಳಾದ ಶಿಲ್ಪ ಹಾಗೂ ಕಲ್ಲಾಪುರದ ಚಿಕ್ಕ ಎಲ್ಲಾಬೋವಿ ಎಂಬುವರ ಮಗ ರಾಜು ಮೂರು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಶಿಲ್ಪ ದ್ವಿತೀಯ ಬಿಕಾಂ ವಿದ್ಯಾರ್ಥಿನಿಯಾದರೆ, ರಾಜು ಗಾರೆ ಮೇಸ್ತ್ರಿಯಾಗಿದ್ದ. ಇಬ್ಬರೂ ಬೋವಿ ಕೋಮಿಗೆ ಸೇರಿದವರಾಗಿದ್ದಾರೆ. ಇಬ್ಬರ ಮದುವೆಗೆ ಎರಡು ಮನೆಯವರಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿ, ಇಬ್ಬರೂ ಬೇರೆ ಬೇರೆಯಾಗುವ ಪರಿಸ್ಥಿತಿ ಬಂದಿತ್ತು, ಆದರೆ ಕಾನೂನಿನ ಪ್ರಕಾರ ಇಬ್ಬರಿಗೂ ವಿವಾಹದ ವಯಸ್ಸು ಆಗಿದ್ದರಿಂದ ಯಾರು ಏನು ಮಾಡುವರು ಎಂಬಂತೆ ಅಕ್ಕೂರು ಪೊಲೀಸ್ ಠಾಣೆ ಮೊರೆಹೋಗಿ ಮನೆಯವರ ಬೆದರಿಕೆಯಿಂದ ನಮ್ಮನ್ನು ರಕ್ಷಣೆ ಮಾಡಿ, ಹೊಸ ಜೀವನಕ್ಕೆ ಅವಕಾಶ ಮಾಡಿಕೊಡಿ ನಮಗೆ ಕಾನೂನಿನಡಿ ನ್ಯಾಯ ನೀಡಿ ಎಂದು ಕೋರಿದ್ದರು. ಎರಡು ಕಡೆಯಿಂದ ಸಮಗ್ರ ಮಾಹಿತಿ ಕಲೆ ಹಾಕಿದ ಪಿಎಸ್‍ಐ ಸದಾನಂದ ಕಾನೂನಿನಡಿ ಸಹಮತ ಸೂಚಿಸಿದ್ದಾರೆ. ಜೋಡಿಗಳು ಪರಸ್ಪರ ಹಾರ ಬದಲಾಯಿಸಿಕೊಂಡು ವಿವಾಹ ಬಂಧನಕ್ಕೊಳಗಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ