ಕಣ್ಮರೆಯಾಗಿದ್ದ ಯುವತಿ, ಪ್ರಿಯಕರನೊಂದಿಗೆ ಪತ್ತೆ !

Kannada News

30-06-2017

ಬೆಂಗಳೂರು: ವಾರದ ಹಿಂದೆ ಕಣ್ಮರೆಯಾಗಿದ್ದ ಪದವಿ ವಿದ್ಯಾರ್ಥಿನಿಯೊಬ್ಬರು ಪ್ರಿಯಕರನ ಜೊತೆ ವಿವಾಹವಾಗಿ ನಗರದ ಹೊರವಲಯದ ಅಕ್ಕೂರು ಪೊಲೀಸ್ ಠಾಣೆಯಲ್ಲಿ ಪತ್ತೆಯಾಗಿದ್ದಾರೆ. ಚೆನ್ನಪಟ್ಟಣದ ಅಂಬಾಡಹಳ್ಳಿಯ ಪ್ರತಿಭಾ (20) ಎಂಬ ಬಿ.ಎ ವಿದ್ಯಾರ್ಥಿನಿ ಅದೇ ಗ್ರಾಮದ ಬಸವಲಿಂಗಪ್ಪ (22)ಕಳೆದ 2 ವರ್ಷದಿಂದ ಪ್ರೀತಿಸುತ್ತಿದ್ದು ವಾರದ ಹಿಂದೆ ನಗರದಲ್ಲಿನ ಕಾಲೇಜಿಗೆ ಹೋಗಿ ಬರುತ್ತೇನೆಂದು ಹೇಳಿ ಬಂದ ವಿದ್ಯಾರ್ಥಿನಿ ಪ್ರತಿಭಾ ಕಾಣೆಯಾಗಿದ್ದಳು. ಈ ಸಂಬಂಧ ಅಕ್ಕೂರು ಪೊಲೀಸರು ದೂರು ದಾಖಲಿಸಿ ವಿದ್ಯಾರ್ಥಿನಿ ಪತ್ತೆ ಕೈಗೊಂಡಿದ್ದರು. ಆದರೆ ಕಾಣೆಯಾಗಿದ್ದ ವಿದ್ಯಾರ್ಥಿನಿ ಪ್ರತಿಭಾ ಪ್ರಿಯಕರ ಬಸವಲಿಂಗಪ್ಪನ ಜೊತೆ ತಿರುಪತಿಗೆ ತೆರಳಿ ವಿವಾಹ ಮಾಡಿಕೊಂಡು ಕೆಲ ದಿನಗಳ ನಂತರ ಠಾಣೆಯಲ್ಲಿ ಪ್ರತ್ಯಕ್ಷವಾಗಿದ್ದಾಳೆ. ಈ ವೇಳೆ ಪೊಲೀಸರ ಮುಂದೆ ನಡೆದ ಘಟನೆಯನ್ನು ವಿವರಿಸಿ, ಕಾನೂನಿನ ಪ್ರಕಾರ ಮದುವೆಯಾಗಿರುವುದಾಗಿ ಈ ಜೋಡಿ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ