ಶ್ರೀಕೃಷ್ಣನ ಬಗ್ಗೆ ಅವಹೇಳನ, ದೂರು ದಾಖಲು !

Kannada News

30-06-2017

ಬೆಂಗಳೂರು:  ಶ್ರೀಕೃಷ್ಣನ ಬಗ್ಗೆ ಫೇಸ್‍ಬುಕ್‍ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ವ್ಯಕ್ತಿಯೋರ್ವನ ವಿರುದ್ದ ಪೊಲೀಸರು ದೂರು ದಾಖಲಿಸಿದ್ದಾರೆ. ಗೌರಿಬಿದನೂರು ಮೂಲದ  ಹರೀಶ್ ಅನೂಡಿ ಎಂಬಾತ ಕಳೆದ ಮೂರು ದಿನಗಳ ಹಿಂದೆ “ ಜಗತ್ತಿನ ಮೊದಲ ಎಡ್ಸ್ ರೋಗಿ ಅವರು, ಆರಾಧಿಸೋ ಶ್ರೀಕೃಷ್ಣ ” ಎಂದು ತನ್ನ ಫೇಸ್ ಬುಕ್ ನಲ್ಲಿ ಪೊಸ್ಟ್ ಮಾಡಿದ್ದ. ಈ ಸಂಬಂಧ ಈತನ ವಿರುದ್ದ ಯಾದವ ಸಂಘದಿಂದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಜತೆಗೆ ಗೌರಿಬಿದನೂರು ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿದೆ. ಈ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ