ಸ್ಕೂಟರ್ ಗೆ ಲಾರಿ ಡಿಕ್ಕಿ ಮಹಿಳೆ ಸಾವು !

Kannada News

30-06-2017

ಬೆಂಗಳೂರು: ರಾಜಾಜಿನಗರದ ಕೃಷ್ಣಾನಂದ ಜಂಕ್ಷನ್‍ನಲ್ಲಿ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದು ಸ್ಕೂಟರ್‍ ನಲ್ಲಿ ಹೋಗುತ್ತಿದ್ದ ತಾಯಿ ಮೃತಪಟ್ಟರೆ ಮಗ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ಮೃತರನ್ನು ಲಕ್ಷ್ಮೀದೇವಿನಗರದ ಮಣಿಮಾಲಾ(45)ಎಂದು ಗುರುತಿಸಲಾಗಿದೆ. ಮಾಲಾ ಅವರ ಪುತ್ರ ಸತ್ಯ(18)ಆಪಾಯದಿಂದ ಪಾರಾಗಿದ್ದಾನೆ, ಕೂಲಿ ಕೆಲಸ ಮಾಡುತ್ತಿದ್ದ ಮಣಿಮಾಲಾ ಅವರು ಗುರುವಾರ ಮಧ್ಯಾಹ್ನ 2.40ರ ವೇಳೆ ಸ್ಕೂಟರ್‍ ನಲ್ಲಿ ಹಿಂದೆ ಕುಳಿತು ಕೃಷ್ಣಾನಂದ ಜಂಕ್ಷನ್ ಕಡೆಯಿಂದ ಕಂಠೀರವ ಸ್ಟುಡಿಯೋ ಕಡೆಗೆ ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದು ಬಲಗಡೆ ಬಿದ್ದ ಮಣಿಮಾಲಾ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಎಡಗಡೆ ಬಿದ್ದ ಸತ್ಯ ಆಪಾಯದಿಂದ ಪಾರಾಗಿದ್ದು ಪ್ರಕರಣ ದಾಖಲಿಸಿಕೊಂಡಿರುವ ರಾಜಾಜಿನಗರ ಸಂಚಾರ ಪೊಲೀಸರು ಲಾರಿ ಚಾಲಕನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ