ನಗರಕ್ಕೆ ಬರಲಿವೆ “ಟ್ರಿಣ್, ಟ್ರಿಣ್” ಸೈಕಲ್ !

Kannada News

30-06-2017 209

ಬೆಂಗಳೂರು: ನಗರದಲ್ಲೂ ಮೈಸೂರಿನಂತೆ "ಟ್ರಿಣ್, ಟ್ರಿಣ್" ಯೋಜನೆ ರೀತಿ ಬಿಬಿಎಂಪಿ ಬಾಡಿಗೆ ಸೈಕಲ್ ಸದ್ದು ಮಾಡಲಿದೆ. ಬಿಎಂಟಿಸಿ ಮತ್ತು ಮೆಟ್ರೋ ವ್ಯವಸ್ಥೆ ನಗರದ ಸಂಚಾರ ದಟ್ಟಣೆ ವ್ಯವಸ್ಥೆಯನ್ನೇನೋ ಕೊಂಚ ಸುಧಾರಿಸಿದೆ. ಆದರೂ, ಬಸ್ ನಿಲ್ದಾಣ ಮತ್ತು ಮೆಟ್ರೋ ಸ್ಟೇಶನ್ ಸಮೀಪದ ಸ್ಥಳಗಳಿಗೆ ತಲುಪಲು ಪ್ರಯಾಣಿಕರು ಪರದಾಡುವ ಸ್ಥಿತಿ ಇದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಬಸ್ ನಿಲ್ದಾಣಗಳಲ್ಲಿ ಬಾಡಿಗೆ ಸೈಕಲ್ ಒದಗಿಸಲು ಬಿಬಿಎಂಪಿ  ಚಿಂತನೆ ನಡೆಸಿದೆ. ಇದೇ ಮೊದಲ ಬಾರಿಗೆ ಈ ವ್ಯವಸ್ಥೆ ನಗರದಲ್ಲಿ ಜಾರಿಗೆ ಬರಲಿದ್ದು, ಈ ಬಗ್ಗೆ ಬಿಬಿಎಂಪಿ, ಬಿ.ಎಂ.ಆರ್.ಸಿ .ಎಲ್ ಹಾಗೂ  ಬಿಎಂಟಿಸಿ ಜೊತೆ ಮಾತುಕತೆ ನಡೆಸಿದೆ. ನಗರದ ವಿವಿಧ ಮೆಟ್ರೋ ನಿಲ್ದಾಣ-ಬಿಎಂಟಿಸಿ ಬಸ್ ನಿಲ್ದಾಣದ ಸುತ್ತಮುತ್ತಲಲ್ಲಿ 3-4 ಕಿಲೋಮೀಟರ್ ಅಂತರದಲ್ಲಿ ಸೈಕಲ್ ನಿಲುಗಡೆ ಸ್ಟ್ಯಾಂಡ್ ಇರಲಿದೆ. ಬಸ್ ಅಥವಾ ಮೆಟ್ರೋ ಇಳಿದವರು ಈ ಬಾಡಿಗೆ ಸೈಕಲ್‍ಗಳನ್ನು ಬಳಸಿಕೊಂಡು ಸೈಕಲ್ ಹಿಂತಿರುಗಿಸಬಹುದಾಗಿದೆ. ನಗರದಲ್ಲಿ ಪ್ರಸ್ತುತ 65 ಲಕ್ಷ ವಾಹನಗಳಿವೆ ಎಂದು ಅಂದಾಜಿಸಲಾಗಿದೆ. ಪ್ರತಿವರ್ಷ ನಗರದಲ್ಲಿ ಶೇ. 10 ರಷ್ಟು ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ರಸ್ತೆ ವಿಸ್ತರಣೆಯಿಂದಲೂ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಸೈಕಲ್ ಯೋಜನೆ ರೂಪಿಸಲಾಗುತ್ತಿದೆ. ಸೈಕಲ್ ಯೋಜನೆಯಿಂದ ವಾಹನಗಳ ಸಂಖ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದ್ದು, ಈ ಯೋಜನೆಗೆ ಅಗತ್ಯ ಎಲ್ಲಾ ಸೌಲಭ್ಯ ಒದಗಿಸಲು ಪಾಲಿಕೆ ಬದ್ಧವಾಗಿದೆ ಇದಲ್ಲದೇ ಉದ್ಯಾನನಗರಿ ಸೈಕಲ್ ಯೋಜನೆಗೆ ಪೂರಕವಾಗಿ ಪ್ರತಿಷ್ಠಿತ ಕಂಪನಿಯೊಂದು ಬಿಬಿಎಂಪಿಯೊಂದಿಗೆ ಪಾಲುದಾರಿಕೆಗೆ ಸಿದ್ಧವಾಗಿದ್ದು, ಈ ಬಗ್ಗೆ ಮುಂದಿನ ವಾರ ಸಭೆ ಕೂಡ ನಡೆಯಲಿದೆ ಎಂದು ತಿಳಿದು ಬಂದಿದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ