ಪೂಜೆ-ಭಜನೆ ಮೂಲಕ ಪ್ರತಿಭಟನೆ !

Kannada News

30-06-2017 211

ಉಡುಪಿ ಕೃಷ್ಣ ಮಠದಲ್ಲಿ ಏರ್ಪಡಿಸಿದ್ದ ಇಫ್ತಾರ್ ಕೂಟವನ್ನು ವಿರೋಧಿಸಿ ಮುಂಬರುವ 2 ರಂದು ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಇದೀಗ ಪ್ರತಿಭಟನೆಯೂ ಶಾಂತಿಯತವಾಗಿ ನಡೆಯಲಿದೆ ಎಂದು ತಿಳಿಸಿದ್ದಾರೆ. ಮಠದಲ್ಲಿ ಏರ್ಪಡಿಸಿದ್ದ ಇಫ್ತಾರ್ ಕೂಟದ ವಿರುದ್ಧ ಶಾಂತಿಯುತ ಪ್ರತಿಭಟನೆ ನಡೆಯಲಿದ್ದೂ, ಶ್ರೀರಾಮಸೇನೆ ಉಡುಪಿ ಘಟಕದಿಂದ ಕೃಷ್ಣನಿಗೆ ಪೂಜೆ- ಭಜನೆ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಲಾಗಿದೆ. ಮುಂದಿನ ಬಾರಿ ನಮಾಜ್ ಗೆ ಅವಕಾಶ ಕೊಡಬೇಡಿ ಎಂದು ಪೇಜಾವರ ಶ್ರೀಗಳಿಗೆ ಶ್ರೀರಾಮ ಸೇನೆ ಮಂಗಳೂರು ಘಟಕದ ಮೋಹನ್ ಭಟ್ ಇದೇ ವೇಳೇ ಮನವಿ ಮಾಡಿದ್ದಾರೆ. ಜೂನ್ 23 ಕ್ಕೆ ನಡೆದಿದ್ದ ಇಫ್ತಾರ್ ಕೂಟ ಪೇಜಾವರಶ್ರೀ ನಡೆಯನ್ನು ಖಂಡಿಸಿದ್ದ ಪ್ರಮೋದ್ ಮುತಾಲಿಕ್ ಉಗ್ರ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ಆದರೆ ಶ್ರೀರಾಮಸೇನೆ ಉಗ್ರ ಪ್ರತಿಭಟನೆಯಿಂದ ಹಿಂದಕ್ಕೆ ಸರಿದಿದ್ದೂ, ಶಾಂತಿಯತ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ