ಆರೋಪಿಗಳು ಶರಣಾದರೆ ಆದೇಶ ವಾಪಸ್ !

Kannada News

30-06-2017

ಬೆಂಗಳೂರು: ರವಿ ಬೆಳಗೆರೆ ಹಾಗು ಇನ್ನೊಬ್ಬರು ಪತ್ರಕರ್ತರಿಗೆ ಜೈಲು ಶಿಕ್ಷೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ ಹೈಕೋರ್ಟ್, ವಾದ ವಿವದಗಳನ್ನು ಆಲಿಸಿದ್ದೂ, ಈ ಕುರಿತು ಆರೋಪಿಗಳು ಶರಣಾದರೆ ಕೂಡಲೇ ಸದನ ಕರೆದು ಆದೇಶ ಹಿಂಪಡೆಯಲಾಗುವುದು ಎಂದು ನ್ಯಾಯಾಲಯಕ್ಕೆ ರಾಜ್ಯದ ಅಡ್ವೋಕೇಟ್ ಜನರಲ್ ಪೊನ್ನಣ್ಣ ಹೇಳಿದ್ದಾರೆ. ಹಕ್ಕು ಬಾದ್ಯಾತಾ ಸಮಿತಿ ವಿಚಾರಣೆಗೆ ಹಾಜರಾಗದೆ ಇರುವುದಕ್ಕೆ ಕ್ಷಮಾಪಣಾ ಪತ್ರ ಬರೆದು ಕೊಡಿ ಎಂದು ಆರೋಪಿಗಳಿಗೆ, ನ್ಯಾಯಾಮೂರ್ತಿಗಳು ಸೂಚನೆ ನೀಡಿದ್ದಾರೆ. ಸದನವನ್ನು ಯಾವಾಗ ಕರೆಯುತ್ತೀರಿ ಎಂಬ ಕುರಿತು ಇಂದು ಸಂಜೆ 4 ಗಂಟೆಗೆ ತಿಳಿಸಿ ಎಂದು ರಾಜ್ಯ ಸರ್ಕಾರಕ್ಕೆ ನ್ಯಾಯಮೂರ್ತಿಗಳು ಸೂಚನೆ ನೀಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ