ಸಂಸತ್ತಿನ ಸೆಂಟ್ರಲ್ ಹಾಲ್ ಅತ್ಯಂತ ಪವಿತ್ರ !

Kannada News

30-06-2017

ಬೆಳಗಾವಿ: ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಮದಬಾವಿ ಗ್ರಾಮದಲ್ಲಿ ಬಸವೇಶ್ವರ (ಕೆಂಪವಾಡ) ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಶಂಕುಸ್ಥಾಪನೆ ನೆರವೇರಿಸಿದರು. ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಭಾಗದ ಜನರ ಬಹುದಿನಗಳ ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ ಎಂದರು. ಬಸವೇಶ್ವರ (ಕೆಂಪವಾಡ) ಏತ ನೀರಾವರಿ ಯೋಜನೆಯಿಂದ ಅಥಣಿ ತಾಲ್ಲೂಕಿನ ಉತ್ತರ ಭಾಗದ ೨೨ ಗ್ರಾಮಗಳಿಗೆ ಅನುಕೂಲವಾಗಲಿದೆ. ೧೩೦೦ ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯಿಂದ ೬೮೦೦೦ ಎಕರೆ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ದೊರಕಲಿದೆ ಎಂದು ಅವರು ತಿಳಿಸಿದರು. ಜಲಸಂಪನ್ಮೂಲ ಇಲಾಖೆಯ ಸಚಿವ ಎಂ.ಬಿ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮತ್ತಿತತರು ಉಪಸ್ಥಿತರಿದ್ದರು. ಇನ್ನು ಕೇಂದ್ರ ಸರ್ಕಾರದ  ಜಾರಿ ಮಾಡಲು ಹೊರಟಿರುವ ಜಿ.ಎಸ್.ಟಿ ಬಗ್ಗೆ ಪ್ರತಿಕ್ರಿಸಿದ ಅವರು ಕೇಂದ್ರ ಸರ್ಕಾರ ಜಾರಿ ಮಾಡುತ್ತಿರುವುದಾಗಿ ಜಿ.ಎಸ್.ಟಿ ಗೆ ತಮ್ಮ ವಿರೋಧ ಇಲ್ಲ, ಸಂಸತ್ತಿನ ಸೆಂಟ್ರಲ್ ಹಾಲ್ ಗೆ ತನ್ನದೇ ಆದ ಪಾವಿತ್ರ್ಯ ಇದೆ.  ಸ್ವಾತಂತ್ರ್ಯ ಬಂದಾಗ, ೨೫, ೫೦ ನೇ ಸ್ವಾತಂತ್ರ್ರೊತ್ಸವ ಸಂದರ್ಭದಲ್ಲಿ ಮಾತ್ರ ಸೆಂಟ್ರಲ್ ಹಾಲ್ ಬಳಕೆ ಮಾಡಲಾಗಿತ್ತು, ಜಿ.ಎಸ್.ಟಿ ಬಿಲ್ ಚಾಲನೆ ಮಾಡಲು, ಬಳಕೆಗೆ ತಮ್ಮ ವಿರೋಧ ಇದೆ ಎಂದರು.  ಜಿ.ಎಸ್.ಟಿ ಯಿಂದ ರಾಜಸ್ವಕ್ಕೆ ಧಕ್ಕೆ ಆಗುವ ಸಾಧ್ಯತೆ ಇದ್ದೂ, ಮುಂಬರುವ ಐದು ವರ್ಷಗಳ ಅವಧಿಯಲ್ಲಿ ರಾಜ್ಯಗಳಿಗೆ ಬರುವ ಆದಾಯಗಳಲ್ಲಿ ನಷ್ಟವಾದಲ್ಲಿ, ಕೇಂದ್ರ ಸರ್ಕಾರ ಬರಿಸುವ ಭರವಸೆ ನೀಡಿದೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ