ಹವಾಮಾನ ಇಲಾಖೆ ಬಗ್ಗೆ ಅಸಮಾಧಾನ !

Kannada News

30-06-2017

ಬೆಂಗಳೂರು: ರಾಜ್ಯದ ಕೃಷಿ ಕುರಿತು, ವಿಕಾಸಸೌಧದಲ್ಲಿ ಕೃಷಿ ಸಚಿವ ಕೃಷ್ಣ ಭೈರೇಗೌಡ ಸುದ್ದಿಗೋಷ್ಟಿ ನಡೆಸಿದ್ದಾರೆ. ಕೃಷಿ ಬೆಳೆಗಳ ಬಿತ್ತನೆಗೆ  ಕಳೆದ ಭಾರಿ ೨೬ ಲಕ್ಷ ಹೆಕ್ಟೇರ್ ವಿಸ್ತೀರ್ಣ ದಷ್ಟು ಬಿತ್ತನೆಯಾಗಿತ್ತು. ಈ ವರ್ಷದ ಜೂನ್ ಅಂತ್ಯದವರೆಗೆ ೧೭ ಲಕ್ಷ ಹೆಕ್ಟೇರ್ ವಿಸ್ತೀರ್ಣದಷ್ಟು ಬಿತ್ತನೆಯಾಗಿದೆ. ಜೂನ್ ಅಂತ್ಯದವರೆಗೂ ವಾಡಿಕೆಯಂತೆ ೧೬ ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬಿತ್ತನೆಯಾಗುತ್ತಿದೆ ಎಂದು ರಾಜ್ಯ ಕೃಷಿ ಬಗ್ಗೆ ಮಾಹಿತಿ ನೀಡಿದ್ದಾರೆ. ಸರಾಸರಿ ನೋಡಿದರೆ ಕೃಷಿ ಬಿತ್ತನೆ ಸದ್ಯ ಉತ್ತಮವಾಗಿದ್ದು, ಕೆಲವೊಂದು ಕಡೆ ಮಳೆಯಾಗಿದೆ. ಜುಲೈ ಅಂತ್ಯದವರೆಗೂ ನಾವು ಕಾದು ನೋಡುತ್ತೇವೆ ಎಂದರು. ಅಲ್ಲದೇ  ಹವಮಾನ ಇಲಾಖೆಯ ಮಾಹಿತಿ ಬಗ್ಗೆ ಹತಾಶೆ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ನಿನ್ನೆ ಹಿಂಗಾರು ಬೆಳೆ ಪರಿಹಾರ ಘೋಷಣೆ ಮಾಡಿದೆ. ಆದರೆ ಅದು ನಾವು ನಿರೀಕ್ಷೆ ಮಾಡಿದಷ್ಟು ಪರಿಹಾರ ಘೋಷಣೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನಾವು ಸುಮಾರು ೧೨೦೦ ಕೋಟಿ ಬರುವ ನಿರೀಕ್ಷೆ ಮಾಡಿದ್ದೆವು. ಆದರೆ ಕೇವಲ ೭೯೫ ಕೋಟಿ ಘೋಷಣೆಯಾಗಿದೆ. ಮುಂಗಾರು ಪರಿಹಾರ ಘೋಷಣೆ ಮಾಡುವಾಗ ಕಡಿಮೆ ಮಾಡಿದ್ದು, ಹಿಂಗಾರು ಬೆಳೆ ಪರಿಹಾರ ನೀಡುವಾಗ ಹೆಚ್ಚಾಗಿ ಭರವಸೆ ನೀಡಿದ್ದೂ, ಈಗಲೂ ಕಡಿಮೆ ಪರಿಹಾರ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಹಣ ಬಿಡುಗಡೆಯಾದ ಬಳಿಕ ರೈತರಿಗೆ ನೀಡುತ್ತೇವೆ ಎಂದಿದ್ದಾರೆ. ರಾಜ್ಯ ಸರಕಾರ ಕೆಲವು ಬೆಳೆಗಳಿಗೆ ಹೆಚ್ಚುವರಿ ಪ್ರೊತ್ಸಾಹ ಧನ ನೀಡುತ್ತಿದೆ, ರಾಗಿ, ಬತ್ತ, ಕೊಬ್ಬರಿ, ಹೆಸರು, ತೊಗರಿ, ಕಡ್ಲೆ, ಈರುಳ್ಳಿ ಬೆಳೆಗಳಿಗೆ ಪ್ರೋತ್ಸಾಹ ಧನ ನೀಡಲಿದ್ದೂ ಇರರಿಂದ ರೈತರ ಸಂಕಷ್ಟ ಕೊಂಚ ಕಡಿಮೆ ಆಗುತ್ತದೆ ಎಂದರು. ರೈತರ ಆರ್ಥಿಕತೆಗೆ ಪ್ರೋತ್ಸಾಹ ಧನ ಕೊಂಚ ಸಹಕಾರಿಯಾಗ್ತಿದೆ, ಆದರೆ ಕೇಂದ್ರವು ಕನಿಷ್ಟ ಬೆಂಬಲ ಬೆಲೆಯಲ್ಲಿ ಹೆಚ್ಚಳ ಮಾಡಬೇಕು ಇದರಿಂದ ರೈತರ ಆರ್ಥಿಕತೆಯಲ್ಲಿ ಇನ್ನಷ್ಟು ಸುಧಾರಣೆ ಆಗಲಿದೆ ಎಂದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ