ಜಿ.ಎಸ್.ಟಿ ವಿರೋಧಿಸಿ ಪ್ರತಿಭಟನೆ !

Kannada News

30-06-2017

ಬೆಂಗಳೂರು: ಜಿ.ಎಸ್.ಟಿ ಕಾಯಿದೆ ಜಾರಿ ವಿರೋಧಿಸಿ ಎಸ್.ಯು.ಸಿ.ಐ ಸಂಘಟನೆ ಕಾರ್ಯಕರ್ತರು ನಗರದ ಮೈಸೂರ್  ಬ್ಯಾಂಕ್ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಜಿ.ಎಸ್.ಟಿ ಜಾರಿಯಿಂದ ಬೆಲೆ ಏರಿಕೆ ಹೆಚ್ಚಾಗಲಿದೆ. ಕೇಂದ್ರ ಸರ್ಕಾರ ಬಡವರ ಮೇಲೆ ಸವಾರಿ ಮಾಡುತ್ತಿದೆ. ಕೂಡಲೇ ಜಿ.ಎಸ್.ಟಿ ಕಾಯಿದೆಯನ್ನ ವಾಪಸ್ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಮೆಡಿಕಲ್, ಹೋಟೆಲ್‌ ಉದ್ಯಮ, ಗಾರ್ಮೆಂಟ್ಸ್ ಸೇರಿದಂತೆ ಹಲವು ಉದ್ಯಮಿಗಳಿಗೆ ಹೊಡೆತ ಬೀಳಲಿದೆ. ಬಂಡವಾಳ ಶಾಹಿ ಲಾಭ ಉದ್ದೇಶದಿಂದ ಕೇಂದ್ರ ಸರ್ಕಾರ ತೆರಿಗೆಯನ್ನು ಜನರ ಮೇಲೆ ಹೇರಿದೆ ಎಂದು ಆರೋಪಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ