ಮಂಡ್ಯ-ಮೈಸೂರಿನಲ್ಲಿ ಹೈಅಲರ್ಟ್ !

Kannada News

30-06-2017

ಮಂಡ್ಯ: ಕೆ.ಆರ್.ಎಸ್ ಜಲಾಶಯ ತುಂಬುವ ಮೊದಲೇ ತಮಿಳುನಾಡಿಗೆ ನೀರು ಹರಿಸುತ್ತಿರುವುದರ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾತ್ರೋರಾತ್ರಿ ಜಲಾಶಯದ ಹೊರ ಹರಿವಿನ ಪ್ರಮಾಣವನ್ನು ನೀರಾವರಿ ಇಲಾಖೆ ಹೆಚ್ಚಿಸಿದೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾವಿರ ಕ್ಯೂಸೆಕ್ಸ್ ಇದ್ದ ಹೊರ ಹರಿವಿನ ಪ್ರಮಾಣ  2,300 ಕೂಸೆಕ್ಸ್ ಗೆ ಏರಿಕೆಯಾಗಿದ್ದೂ, ಜಲಾಶಯ ತುಂಬುವ ಮೊದಲೇ ನದಿಗೆ ಹೆಚ್ಚಿನ ನೀರು ಬಿಡುತ್ತಿದೆ. ನಾಲೆಗೆ ನೀರು ಬಿಡಿ ಎಂದರೆ ನದಿಗೆ ನೀರು ಬಿಟ್ಟಿರುವ ಕ್ರಮಕ್ಕೆ ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ರೈತರ ಪ್ರತಿಭಟನೆ ಎಚ್ಚರಿಕೆಯ ಹಿನ್ನಲೆ ಅಹಿತಕರ ಘಟನೆಗಳು ನಡೆಯದ ಹಾಗೆ, ಜಿಲ್ಲಾದ್ಯಂತ ಪೊಲೀಸ್ ಹೈ ಅಲರ್ಟ್ ಘೋಷಿಸಿದ್ದಾರೆ. ಮಂಡ್ಯ, ಮಳವಳ್ಳಿ, ಮದ್ದೂರು, ಶ್ರೀರಂಗಪಟ್ಟಣದಲ್ಲಿ  ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಿದ್ದು, ಎಸ್.ಪಿ ಜಿ. ರಾಧಿಕಾ ನೇತೃತ್ವದಲ್ಲಿ ಹೆಚ್ಚಿನ ಗಸ್ತು ನಡೆಸಿದ್ದಾರೆ. ಕೆ.ಆರ್.ಎಸ್.ಗೆ ಮಂಡ್ಯದ ಎಸ್.ಪಿ ಜಿ.ರಾಧಿಕಾ ಭೇಟಿ ನೀಡಿದ್ದೂ. ಪೊಲೀಸರ ಭದ್ರತೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಜಲಾಶಯದಿಂದ ನೀರು ಬಿಟ್ಟ ಹಿನ್ನೆಲೆ ಶ್ರೀರಂಗಪಟ್ಟಣದ ಕರವೇಯಿಂದ ಸರಕಾರದ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರು ಮೈಸೂರು ಹೆದ್ದಾರಿ ತಡೆದು ಪ್ರತಿಭಟಿಸಿದರು. ಇನ್ನೂ ಮೈಸೂರಿನ ಕಬಿನಿ ಜಲಾಶಯದಿಂದ ಇಂದು ಭಾರೀ ಪ್ರಮಾಣದ ನೀರು ಹೊರ ಬಿಡುತ್ತಿರುವುದಕ್ಕೆ ಸ್ಥಳೀಯ ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆಯೂ ನಡೆಯಿತು. ಖಾಸಗಿ ವಿದ್ಯುತ್ ಕಂಪನಿ ಸುಭಾಷ್ ಪವರ್ ಕಾರ್ಪೊರೇಷನ್ ಮೂಲಕ ಕಪಿಲಾ ನದಿಗೆ ನೀರು ಅನಾವಶ್ಯಕವಾಗಿ ತಲುಪುತ್ತಿದ್ದು, ಅಧಿಕಾರಿಗಳು ಖಾಸಗಿ ಕಂಪನಿಯ ಗುಲಾಮರಾಗಿದ್ದಾರೆಂದು ಘೋಷಣೆ‌ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಲಾಶಯದಿಂದ ಹರಿಸುತ್ತಿರುವ ನೀರನ್ನು ತಕ್ಷಣ ನಿಲ್ಲಿಸುವಂತೆ ಪ್ರತಿಭಟನಾಕಾರರ ಒತ್ತಾಯಿಸಿದ್ದಾರೆ. ಜಲಾಶಯ ತುಂಬದಿದ್ದರೂ ಹಣದಾಸೆಗೆ ನೀರನ್ನು ಹೊರಬಿಟ್ಟಿರುವುದಾಗಿ ಆರೋಪ ಮಾಡಿದ್ದಾರೆ.                       ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ