ಕಾಣೆಯಾಗಿದ್ದ ಬಾಲಕಿ ಶವವಾಗಿ ಪತ್ತೆ !

Kannada News

30-06-2017

ಕೊಪ್ಪಳ: ಎರಡು  ದಿನದ ಹಿಂದೆ  ಕಾಣೆಯಾಗಿದ್ದ ೨ ವರ್ಷದ  ಬಾಲಕಿ ಶವವಾಗಿ ಪತ್ತೆಯಾಗಿದೆ. ಬಾಲಕಿ ಮನೆ ಮುಂದಿನ ಮನೆಯ ನೀರಿನ ಸಂಪ್ ನಲ್ಲಿ ಶವ ಪತ್ತೆಯಾಗಿದೆ. ಕಾಣೆಯಾಗಿದ್ದ ಬಾಲಕಿ ಉಸಾನಾ ಕೊಪ್ಪಳ ಜಿಲ್ಲೆ ಯಲಬುರ್ಗಾ ಪಟ್ಟಣದ, ಬಾಬುಸಾಬ್ ವಣಗೇರಿ ದಂಪತಿಯ ಪುತ್ರಿ ಯಾಗಿದ್ದೂ, ಎರಡು ದಿನದಿಂದ ಕಾಣೆಯಾಗಿದ್ದ ಬಾಲಕಿಯನ್ನು, ಎರಡು ದಿನಗಳಿಂದ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಆದರೆ ಇಂದು ಅನುಮನಾಸ್ಪದವಾಗಿ ಸಂಪ್ ತೆಗೆದು ನೋಡಿದಾಗ ಬಾಲಕಿ ಶವ ಮೇಲೆ ತೇಲುತ್ತಿತ್ತು. ಮೃತ ಬಾಲಕಿಯ ಶವಕಂಡು ಪೊಷಕರ ಆಕ್ರಂದನ ಮುಗಿಲು ಮುಟ್ಟಿದೆ. ಕೊಲೆ ಮಾಡಿ ಸಂಪ್ ನಲ್ಲಿ ಬಿಸಾಡಿ ಹೋಗಿದ್ದಾರೆ ಎಂದು ಕುಟುಂಬಸ್ಥರ ಆರೋಪಿಸಿದ್ದಾರೆ. ಯಲಬುರ್ಗಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ