ನೇಣು ಬಿಗಿದುಕೊಂಡು ರೈತ ಆತ್ಮ ಹತ್ಯೆ !

Kannada News

30-06-2017 215

ಹುಬ್ಬಳ್ಳಿ: ರೈತರ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸಲು ವಿಫಲವಾಗಿದೆ ಎಂಬುದಕ್ಕೆ ಕಳೆದ ಕೆಲ ದಿನಗಳಿಂದೂ ನಡೆಯುತ್ತಿರುವ ರೈತರ ಆತ್ಮ ಹತ್ಯೆಗಳೇ ಸಾಕ್ಷಿಯಾಗಿವೆ, ಇನ್ನೂ ರಾಜ್ಯದಿಂದ ರೈತರ ಸಹಕಾರ ಸಂಘಗಳಲ್ಲಿನ 50,00 ಸಾವಿರದವರೆಗಿನ ಸಾಲ ಮನ್ನಾಮಾಡಿ ರೈತರ ಸ್ನೇಹಿ ಸರಕಾರವೆಂದು ಬೀಗುತ್ತಿರುವ, ಸರ್ಕಾರ ಇತ್ತ ಕಡೆ ಗಮನ ಹರಿಸಬೇಕಿದೆ. ಕಳೆದ ಕೆಲವು ದಿನಗಳೊಂದಲೂ ರೈತರ ಸರಣಿ ಆತ್ಮ ಹತ್ಯೆಗಳು ಮುಂದವರೆದಿವೆ. ಇಂದೂ ಕೂಡ ಬಳ್ಳಾರಿಯಲ್ಲಿ, ಸಾಲಬಾಧೆಯಿಂದ ಬೇಸತ್ತು ರೈತನೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲೆಯ ಕುಂದಗೋಳ ತಾಲ್ಲೂಕಿನ ನೆಲಗುಡ್ಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರು ಏಕರೆ ಜಮೀನು ಹೊಂದಿದ್ದ ರೈತ ರಾಯನಗೌಡ ಪಾಟೀಲ್ (೪೫) ಆತ್ಮಹತ್ಯೆಗೆ ಶರಣಾಗಿದ್ದಾರೆ.  ಸರಿಯಾಗಿ ಬೆಳೆಬಾರದ ಹಿನ್ನೆಲೆ ಮತ್ತು ಮಳೆ ಅಭಾವ ಹಾಗೂ ಸಾಲ ಇವೆಲ್ಲವುಗಳಿಂದ  ಬೇಸತ್ತ ರೈತ ತನ್ನ ಜಮೀನಿನಲ್ಲಿಯೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿವಿಧ ಬ್ಯಾಂಕುಗಳಲ್ಲಿ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದೂ, ಸಾಲಬಾಧೆ ತಾಳಲಾರದೆ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಕುಂದಗೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ