ನ್ಯಾಯಕ್ಕಾಗಿ ಬಂದ ಮಹಿಳೆಗೆ ಲೈಂಗಿಕ ಕಿರುಕಳ !

Kannada News

30-06-2017

ಬಳ್ಳಾರಿ: ನ್ಯಾಯ ಕೇಳಿಕೊಂಡು ಕಚೇರಿಗೆ ಬರುತ್ತಿದ್ದ ಮಹಿಳೆಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ಕಮಲಾಪುರ ಪಟ್ಟಣದಲ್ಲಿ ಮಹಿಳೆಯೊಬ್ಬರು ತಮ್ಮ ಮನೆಗೆ ಮುಂಭಾಗದಲ್ಲಿ ರಸ್ತೆಯ ಬಳಿ ಬೇರೊಬ್ಬರು ಶೌಚಾಲಯ ನಿರ್ಮಾಣ ಮಾಡಿದ್ದರು. ಈ ಹಿನ್ನಲೆಯಲ್ಲಿ ಶೌಚಾಲಯ ತೆರವುಗೊಳಿಸುವಂತೆ ಕಳೆದ ಒಂದು ವರ್ಷದಿಂದ ಪಟ್ಟಣ ಪಂಚಾಯಿತಿಗೆ ಮನವಿ ಮಾಡಿದ್ದಾರೆ. ಇದಕ್ಕಾಗಿ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲಾ ಅಧಿಕಾರಿಗಳಿಗೂ ಮನವಿ ಮಾಡಿದ್ದರೂ, ಪ್ರಯೋಜನವಾಗಿಲ್ಲ. ಇನ್ನೂ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಶಿವಕುಮಾರ್ ಕಟ್ಟಿಮನಿಗೆ ಕೂಡ ಈ ಮಹಿಳೆ ಕಳೆದ ಒಂದು ವರ್ಷದಿಂದ ಮನವಿ ಮಾಡುತ್ತಲೇ ಇದ್ದಾಳೆ. ಹೀಗೆ ಈ ಮಹಿಳೆ ನ್ಯಾಯ ಕೇಳಿಕೊಂಡು ಕಚೇರಿಗೆ ಹೋದಾಗ ಶಿವಕುಮಾರ್ ಕಟ್ಟಿಮನಿ ಸಾಕಷ್ಟು ಅಸಭ್ಯವಾಗಿ ವರ್ತಿಸಿದ್ದಾನೆ. ಇನ್ನೂ ಈ ಮಹಿಳೆಗೆ ಪೋನ್ ಕರೆ ಮಾಡಿ ನಿಮ್ಮ ಮನೆಗೆ ಬರ್ತೇನೆ, 10 ನಿಮಿಷ ಮಲಗಿ ಹೋಗ್ತೀನಿ ಅಂತಾ ಹೇಳುವುದು, ಜೊತೆಗೆ ಪೋನ್ ಮಾಡಿ ನಮ್ಮ ಮನೆಗೆ ಬಾ ಅಂತಾ ಕರೆದಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಶಿವಕುಮಾರ್ ವರ್ತನೆ ಬಗ್ಗೆ ಅನುಮಾನಗೊಂಡ ಈ ಮಹಿಳೆ ಶಿವಕುಮಾರ್ ಮಾತನಾಡಿರುವುದನ್ನೆಲ್ಲಾ ರೆಕಾರ್ಡ್ ಮಾಡಿಕೊಂಡಿದ್ದಾಳೆ. ಇನ್ನೂ ಮಹಿಳೆ ರೆಕಾರ್ಡ್ ಮಾಡಿಕೊಂಡಿರುವುದು ಶಿವಕುಮಾರ್ ಕಟ್ಟಿಮನಿಗೆ ಗೊತ್ತಾಗಿದೆ. ಈಗ ರೆಕಾರ್ಡ್ ಡಿಲಿಟ್ ಮಾಡ್ಬೇಕು, ಇಲ್ಲದಿದ್ದಲ್ಲಿ ನಿನ್ ಮೇಲ್ ಎಫ್.ಐ.ಆರ್ ದಾಖಲಿಸುತ್ತೇನೆ ಎಂದು ಮಹಿಳೆಗೆ ಹೆದರಿಸುತ್ತಿರುವುದಾರಿ ಆರೋಪಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ