ಜಿ.ಎಸ್.ಟಿ ಗೆ ಸಾಕ್ಷಿಯಾಗಲಿದೆ ಸೆಂಟ್ರಲ್ ಹಾಲ್ !

Kannada News

30-06-2017

ನವದೆಹಲಿ: ಕೇಂದ್ರದ ಪ್ರತಿಷ್ಠಿತ ಸರಕು ಮತ್ತು ಸೇವಾ ತೆರಿಗೆ ಕಾಯಿದೆ ನಾಳೆಯಿಂದ ದೇಶಾದ್ಯಂತ ಅಧೀಕೃತವಾಗಿ ಜಾರಿಗೆ ಬರುತ್ತಿದ್ದು, ಈ ಕುರಿತು ಕೇಂದ್ರ ಸರ್ಕಾರ ಸಾಕಷ್ಟು ಉತ್ಸಾಹದಿಂದಿದೆ. ಈ ಸಂಬಂಧ ಇಂದು ರಾತ್ರಿ ವಿಷೇಶ ಅಧಿವೇಶನ ಕರೆಯಯಾಗಿದ್ದು, ಈ ಅಧಿವೇಶನವು ಸಂಸತ್ತಿನ ಸೆಂಟ್ರಲ್ ಹಲ್ ನಲ್ಲಿ ನಡೆಯಲಿದೆ. ಈ ಸಭೆಯಲ್ಲಿ ವಾಲಿವುಡ್ ನ ಅಮಿತಾ ಬಚ್ಚನ್, ಮತ್ತು ಗಾನ ಕೋಗಿಲೆ ಲತಾ ಮಂಗೇಶ್ಕರ್, ಉದ್ಯಮಿ ರತನ್ ಟಾಟಾ ಅವರು ಭಾಗಿಯಾಲಿದ್ದಾರೆ ಎಂದು ತಿಳಿದು ಬಂದಿದೆ. ವಿಶೇಷ ಅಧಿವೇಶನದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಮತ್ತು ಹೆಚ್.ಡಿ ದೇವೇಗೌಡರನ್ನೂ ಆಹ್ವಾನಿಸಿದ್ದಾರೆ. ಆದರೆ ವಿರೋಧ ಪಕ್ಷಗಳು ಅಧಿವೇಶನದಲ್ಲಿ ಭಾಗವಹಿಸಲು ನಿರಾಕರಿಸಿದ್ದೂ ಕಾಂಗ್ರೆಸ್, ಮತ್ತು ಪಶ್ಚಿಮ ಬಂಗಾಳದ ತೃಣ ಮೂಲ ಕಾಂಗ್ರೆಸ್ ನಿರಾಕರಿಸಿವೆ. ಈ ಕುರಿತು ಹೇಳಿಕೆ ನೀಡಿರುವ ಕಾಂಗ್ರೆಸ್ ಪಕ್ಷ ಇದನ್ನು ತೀವ್ರವಾಗಿ ವಿರೋಧಿಸಿದೆ. ಸೆಂಟ್ರಲ್ ಹಾಲ್ ನಲ್ಲಿ ದೇಶದ ಸ್ವಾತಂತ್ರ್ಯ ಮತ್ತು ಅದಕ್ಕೆ ಸಂಬಂಧಿಸಿದ ಬಗ್ಗೆ ವಿಷೇಶ ಅಧಿವೇಶನ ನಡೆದಿದ್ದವು. 1974 ರಲ್ಲಿ ಮಧ್ಯರಾತ್ರಿ ಅಧಿವೇಶನ ಮತ್ತು 25 ವರ್ಷದ ಸಿಲ್ವರ್ ಜೂಬ್ಲಿ ಅಧಿವೇಶನ, ಹಾಗೂ 1997 ಸ್ವಾತಂತ್ರ್ಯ ಬಂದು 50 ವರ್ಷಗಳ ಸಂಭ್ರಾಮಾಚರಣೆಯಲ್ಲಿ ಈ ರೀತಿಯ ಐತಿಹಾಸಿಕವಾದ ಅಧಿವೇಶನಗಳು ನಡೆದಿದ್ದವು. ಆದರೆ ಪ್ರಚಾರಕ್ಕೆಂದೇ ಈ ರೀತಿ ಅಧಿವೇಶನ ನಡೆಸುವುತ್ತಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದ್ದರಿಂದ  ಈ ವಿಚಾರದಲ್ಲಿ ಕಾಂಗ್ರೆಸ್ ದೂರವಿರಲು ನಿರ್ಧರಿಸಿದೆ. ಕಾರ್ಯಕ್ರಮ ರಾತ್ರಿ 11 ಗಂಟೆಗೆ ಪ್ರಾರಂಭವಾಗಲಿದ್ದೂ, ಮಧ್ಯರಾತ್ರಿಯವರೆಗೂ ನಡೆಯುವ ಸಾಧ್ಯತೆಗಳಿವೆ ಎಂದು ಮೂಲಗಳಿ ತಿಳಿಸಿವೆ. ಲೋಕ ಸಭೆಯ ಸ್ಪೀಕರ ಸುಮಿತ್ರಾ ಮಹಾಜನ್, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಆರ್.ಬಿ.ಐ ಮಾಜಿ ಗವರ್ನರ್ ಡಿ ಸುಬ್ಬಾರಾವ್, ಈಗಿನ ಆರ್.ಬಿ.ಐ ಗವರ್ನರ್ ಊರ್ಜಿತ್ ಪಟೇಲ್ ಹೀಗೆ ಸಾಕಷ್ಟು ಗಣ್ಯರ ಪಟ್ಟಿಯಿದೆ. ಆದರೆ ಪಟ್ಟಿಯಲ್ಲಿ ಮಾಜಿ ಆರ್.ಬಿ.ಐ.ಗವರ್ನರ್ ರಾದಂತಹ ರಘುರಾಮ್ ರಾಜನ್ ಅವರ ಹೆಸರು ಪಟ್ಟಿಯಲ್ಲಿಲ್ಲ ಎಂದು ತಿಳಿದು ಬಂದಿದೆ. ಒಟ್ಟಾರೆ ನಾಳೆಯಿಂದ ಇಷ್ಟುವರ್ಷಗಳಿಂದ ನಡೆದುಕೊಂಡು ಬಂದಿದ್ದ ತೆರಗೆಯ ವಿಧಾನಗಳನ್ನು ಕೈಬಿಟ್ಟು ಹೊಸದರ ಕಡೆಗೆ ಮುಖಮಾಡಿರುವುದು ಎಲ್ಲರಲ್ಲಿ ಕಾರತ, ಗೊಂದಲ, ಭಯ ಮತ್ತು ಏನಾಗುತ್ತದೋ ಎಂಬ ದುಗುಡದಲ್ಲೇ ಜಿ.ಎಸ್.ಟಿ ಯನ್ನು ಒಪ್ಪೊಕೊಳ್ಳುವಂತಾಗಿದೆ. ಇದೀಗ ಎಲ್ಲರ ಚಿತ್ತ ಸಂಸತ್ತಿನ ಸೆಂಟ್ರಲ್ ಹಾಲ್ ನತ್ತ ನೆಟ್ಟಿದೆ.         

 

 ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ