ನಾಳೆ ಮದುವೆಯಾಗಬೇಕಿದ್ದ ಯೋಧನ ಮರಣ !

Kannada News

30-06-2017

ಬಳ್ಳಾರಿ: ತೀವ್ರ ಜ್ಚರದಿಂದ ಬಳಲುತ್ತಿದ್ದ ಯೋಧರೊಬ್ಬರು ಮರಣ ಹೊಂದಿದ್ದಾರೆ. ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಬಸರಳ್ಳಿ ಗ್ರಾಮದಲ್ಲಿ  ಈ ಘಟನೆ ನಡೆದಿದೆ. ಕೇಂದ್ರ ಮೀಸಲು ಪಡೆಯ ಯೋಧರಾದ ಹನುಮಂತಪ್ಪ ಕೊರ್ಲಗಟ್ಟಿ (೩೦) ಮೃತ ಯೋಧರು. ನಾಳೆ ಇವರ ವಿವಾವಿದ್ದೂ, ವಿವಾಹಕ್ಕೆಂದೇ ರಜೆ ಮೇಲೆ ಊರಿಗೆ ಬಂದಿದ್ದರು, ಜುಲೈ ಒಂದರಂದು ಇವರ ಮದುವೆ ನಿಗದಿಯಾಗಿತ್ತು. ಆದರೆ ಇಷ್ಟರಲ್ಲೆ ವಿಧಿ ಆಟವಾಡಿದ್ದು ಕುಟುಂಬಸ್ಥರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಇವರ ಸಾವನ್ನು ಭರಿಸದ ಕುಟುಂಬಸ್ಥರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ತೀವ್ರ ಜ್ವರದಿಂದ ಬಳಳುತ್ತಿದ್ದ ಹನುಮಂತಪ್ಪ ಅವರನ್ನು ನಿನ್ನೆ ಚಿಕಿತ್ಸೆ ಗಾಗಿ ಹುಬ್ಬಳ್ಳಿಗೆ ಕರೆದೊಯ್ಯುವ ವೇಳೆ ಸಾವನ್ನಪ್ಪಿದ್ದಾರೆ.  ಮದುವೆ ಕಾರ್ಡ್ ಹಂಚುವ ಭರಾಟೆಯಲ್ಲಿ ಸೂಕ್ತ ಚಿಕಿತ್ಸೆ ಪಡೆದಿರಲಿಲ್ಲ ಎಂದು ಹೇಳಲಾಗುತ್ತಿದೆ. ಇವರ ಸಾವಿನಿಂದ ಬಸರಳ್ಳಿ ಗ್ರಾಮದಲ್ಲಿ ಈಗ ಶೋಕ ಮಡುಗಟ್ಟಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ