ಮಾರ್ಗಸೂಚಿಯಿಲ್ಲದೆ ಶಿಕ್ಷೆ ಪ್ರಕಟ ಸರಿಯಲ್ಲ !

Kannada News

29-06-2017

ಬೆಂಗಳೂರು: ರವಿ ಬೆಳಗೆರೆ ಒಂದು ವರ್ಷ ಜೈಲು ಶಿಕ್ಷೆ ಆದೇಶ ಪ್ರಕರಣವನ್ನು ಇಂದು ಹೈಕೋರ್ಟ್ ನಲ್ಲಿ ವಿಚಾರಣೆ ನಡೆಸಲಾಯಿತು. ವಿಚಾರಣೆ ವೇಳೇ, ಹೈಕೋರ್ಟ್ ನ್ಯಾಯಮೂರ್ತಿಗಳು, ಯಾವ ಆಧಾರದಲ್ಲಿ ಶಿಕ್ಷೆ ಪ್ರಕಟ ಮಾಡಿದ್ರಿ? ಒಂದು ವರ್ಷ ಶಿಕ್ಷೆ ಪ್ರಕಟಕ್ಕೆ ಅನುಸರಿಸಿದ ಮಾರ್ಗಸೂಚಿ ಯಾವುದು ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಪ್ರಜಾಪ್ರಭುತ್ವದಲ್ಲಿ ಮಾರ್ಗಸೂಚಿಯಿಲ್ಲದೆ ಶಿಕ್ಷೆ ಪ್ರಕಟ ಸರಿಯಲ್ಲ ಎಂದು, ಹೈಕೋರ್ಟ್ ನ್ಯಾಯಮೂರ್ತಿ ಅಶೋಕ್ ಬಿ ಹಿಂಚಿಗೇರಿ ಅಭಿಪ್ರಾಯಪಟ್ಟಿದ್ದಾರೆ. ಪತ್ರಿಕಾರಂಗ ಪ್ರಜಾಪ್ರಭುತ್ವದ ನಾಲ್ಕನೇ ಅಂಗ, ವ್ಯವಸ್ಥೆಯ ಹಿತದೃಷ್ಟಿಯಿಂದ ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಿ ಎಂದು ಹೇಳಿದ ಅವರು, ಪ್ರಕರಣವನ್ನು ನಾಳೆಗೆ ಮುಂದೂಡಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ