ಜಮೀನಿಗಾಗಿ ಗಂಡನನ್ನೇ ಕೊಂದ ಹೆಂಡತಿ !

Kannada News

29-06-2017

ದಾವಣಗೆರೆ: ಎರಡು ತಿಂಗಳ ಹಿಂದೆ ಅನುಮಾನಸ್ಪದವಾಗಿ ಮೃತಪಟ್ಟಿದ್ದ ದಾವಣಗೆರೆಯ, ಹೊಸೂರು ಗ್ರಾಮದ ಸಾರಥಿ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಪ್ರಕರಣವನ್ನು ಕೈಗೆತ್ತಿಕೊಂಡ ಚನ್ನಗಿರಿ ಪೊಲೀಸರ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣದಲ್ಲಿ ಮಕ್ಕಳೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿರುವ ವಿಷಯ ತಿಳಿದು ಬಂದಿದೆ. ಗಂಡ ಸಾಲಕ್ಕಾಗಿ ಜಮೀನು ಮಾರುತ್ತಾನೆ ಎಂದು ಮಕ್ಕಳೊಂದಿಗೆ ಸೇರಿ, ಗಂಡನನ್ನು ಕೊಲೆ ಮಾಡಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ರತ್ನಮ್ಮ, ದೇವರಾಜ ಮತ್ತು ರವಿ ಬಂಧಿತ ಆರೋಪಿಗಳು. ಜಮೀನಿನ ಆಸೆಗಾಗಿ ಕೈ ಹಿಡಿದ ಗಂಡನನ್ನೇ ಕೊಂದ ಮಹಿಳೆ ಇದೀಗ ಕಂಬಿ ಎಣಿಸುವಂತಾಗಿದೆ.    ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ