ಹಣ ಕೊಡದಿದ್ದಕ್ಕೆ ಯುವತಿಯ ಕೊಲೆ !

Kannada News

29-06-2017

ಬೆಂಗಳೂರು: ನಗರದ ಹೊರವಲಯದ ಕುಂಬಳಗೋಡುವಿನ ರಾಮಸಂದ್ರ ಗ್ರಾಮದಲ್ಲಿ ಹಣ ಕೊಡದಿದ್ದರಿಂದ ರೊಚ್ಚಿಗೆದ್ದ ಯುವಕನೊಬ್ಬ ಪರಿಚಯಸ್ಥ ಯುವತಿಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಕೊಲೆಯಾದವರನ್ನು ರಾಮಸಂದ್ರದ ಕಾವ್ಯ(21) ಎಂದು ಗುರುತಿಸಲಾಗಿದೆ. ಕಾವ್ಯಳನ್ನು ಕೊಲೆಗೈದು ಪರಾರಿಯಾಗಿದ್ದ ಅದೇ ಗ್ರಾಮದ ವೆಂಕಟೇಶ್‍ನನ್ನು ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ, ಕಾವ್ಯಳ ಬಳಿ ಹಣವಿರುವುದನ್ನು ತಿಳಿದುಕೊಂಡ ಪರಿಚಯಸ್ಥನಾದ ವೆಂಕಟೇಶ್ ನಿನ್ನೆ ಆಕೆ ಮನೆಯಲ್ಲಿ ಒಂಟಿಯಾಗಿರುವುದನ್ನು ನೋಡಿಕೊಂಡು ಬಂದಿದ್ದಾನೆ. ಹಣದ ಅವಶ್ಯಕತೆಯಿರುವುದನ್ನು ಹೇಳಿಕೊಂಡು ಹಣ ಕೊಂಡುವಂತೆ ಕೇಳಿದ್ದು, ಒಪ್ಪದಿದ್ದಾಗ ಆಕೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ, ಕಾವ್ಯ ಅವರ ತಾಯಿ ರಾತ್ರಿ ವ್ಯಾಪಾರ ಮುಗಿಸಿ ಮನೆಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ರಾಮನಗರ ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ಕುಂಬಳಗೋಡು ಪೊಲೀಸರು ಪರಾರಿಯಾಗಿದ್ದ ಆರೋಪಿ ವೆಂಕಟೇಶ್ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ