ಅಡವಿಡಲು ತಂದ ಚಿನ್ನಾಭರಣ ಕಳ್ಳರ ಪಾಲು !

Kannada News

29-06-2017

ಬೆಂಗಳೂರು: ಬಗಲಕುಂಟೆಯ ಅಯ್ಯಪ್ಪ ದೇವಾಲಯದ ಬಳಿಯ ಫೆಡರಲ್ ಬ್ಯಾಂಕ್ ನಲ್ಲಿ ಒಡವೆ ಅಡವಿಟ್ಟು ಸಾಲ ಪಡೆಯಲು ಹೋಗುತ್ತಿದ್ದ ಮಹಿಳೆಯೊಬ್ಬರ 200 ಗ್ರಾಂ ಚಿನ್ನಾಭರಣಗಳಿದ್ದ ಬ್ಯಾಗ್‍ನ್ನು ಹಾಡುಹಗಲೇ ದುಷ್ಕರ್ಮಿಗಳು ಕಸಿದು ಪರಾರಿಯಾಗಿದ್ದಾರೆ. ಸಹಕಾರ ನಗರದ ಸುಕನ್ಯಾ ಅವರು ಬಗಲಕುಂಟೆಯ ಆಯ್ಯಪ್ಪ ದೇವಸ್ಥಾನದ ಬಳಿಯ ಫೆಡರಲ್ ಬ್ಯಾಂಕ್ ನಲ್ಲಿ ಒಡವೆ ಮೇಲೆ ಸಾಲ ತೆಗೆದುಕೊಳ್ಳಲು  ನಿನ್ನೆ ಬೆಳಿಗ್ಗೆ 10.30ರಲ್ಲಿ, ಚಿನ್ನಾಭರಣ ತೆಗೆದುಕೊಂಡು ಹೋಗುತ್ತಿದ್ದಾಗ ಸುಕನ್ಯಾ ಅವರ ಬ್ಯಾಗ್‍ನ್ನು ದುಷ್ಕರ್ಮಿಗಳು ಕಸಿದು ಪರಾರಿಯಾಗಿದ್ದಾರೆ. ಸುಕನ್ಯಾ ಅವರು ಚಿನ್ನಾಭರಣಗಳನ್ನು ಇಂಡಿಯನ್ ಬ್ಯಾಂಕ್‍ನ ಲಾಕರ್‍ ನಲ್ಲಿಟ್ಟಿದ್ದು, ಅಲ್ಲಿ ಚಿನ್ನಾಭರಣಗಳ ಮೇಲೆ ಸಾಲ ಕೊಡುವುದಿಲ್ಲ ಎನ್ನುವ ಕಾರಣಕ್ಕೆ ಅಲ್ಲಿಂದ ಚಿನ್ನಾಭರಣಗಳನ್ನು ತೆಗೆದುಕೊಂಡು ಫೆಡರಲ್ ಬ್ಯಾಂಕ್‍ನಲ್ಲಿ ಚಿನ್ನದ ಮೇಲೆ ಸಾಲ ಪಡೆಯಲು ಬರುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಇಂಡಿಯನ್ ಬ್ಯಾಂಕ್ ನಿಂದ ಸುಕನ್ಯಾ ಅವರು ಚಿನ್ನಾಭರಣಗಳನ್ನು ಬ್ಯಾಗ್‍ ನಲ್ಲಿಟ್ಟುಕೊಂಡು ಹೋಂಡಾ ಆಕ್ಟಿವಾ ಸ್ಕೂಟರ್‍ ನಲ್ಲಿ ಹೋಗುತ್ತಿದ್ದುದ್ದನ್ನು ಗಮನಿಸಿರುವ ದುಷ್ಕರ್ಮಿಗಳು, ಹಿಂಬಾಲಿಸಿ ಫೆಡರಲ್ ಬ್ಯಾಂಕ್ ಬಳಿ ಬಂದು ಸ್ಕೂಟರ್ ನಿಲ್ಲಿಸಿ ಬ್ಯಾಂಕ್ ಒಳ ಹೋಗುವಷ್ಟರಲ್ಲಿ ಹಿಂದಿನಿಂದ ಬಂದು ಬ್ಯಾಗನ್ನು ಕಸಿದು ಪರಾರಿಯಾಗಿದ್ದಾರೆ. ಬ್ಯಾಗ್ ನಲ್ಲಿ 200 ಗ್ರಾಂ ತೂಕದ ನೆಕ್ಲೆಸ್, ಚಿನ್ನದ ಸರ, ಇನ್ನಿತರ ಆಭರಣಗಳಿದ್ದವು ಎಂದು ಸುಕನ್ಯಾ ನೀಡಿರುವ ದೂರು ದಾಖಲಿಸಿರುವ ಬಗಲಗುಂಟೆ ಪೊಲೀಸರು ಸ್ಥಳಕ್ಕ ಭೇಟಿ ನೀಡಿ ಪರಿಶೀಲನೆ ನಡೆಸಿ, ದುಷ್ಕರ್ಮಿಗಳಿಗಾಗಿ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ಚೇತನ್ ಸಿಂಗ್ ರಾಥೋಡ್ ತಿಳಿಸಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ