ಕ್ಷಮೆ ಯಾಚಿಸಿದ ಮೈಸೂರಿನ ಮಾಜಿ ಮೇಯರ್ !

Kannada News

29-06-2017

ಮೈಸೂರು: ಮೈಸೂರಿನ ಸರ್ಕಾರಿ ಸಭಾಂಗಣದಲ್ಲಿ ಗೋಮಾಂಸ ಸೇವನೆ ಮಾಡಿರುವ ಪ್ರಕರಣಕ್ಕೆ, ಘಟನೆ ಕುರಿತು ಮೈಸೂರಿನ ಮಾಜಿ ಮೇಯರ್ ಪುರುಷೋತ್ತಮ್ ಕ್ಷಮೆ ಯಾಚಿಸಿದ್ದಾರೆ. ಅಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಮೇಯರ್ ಪುರುಷೋತ್ತಮ್, ಇಂದು ಸುದ್ದಿಗೋಷ್ಠಿ ನಡೆಸಿ ಕ್ಷಮೆಯಾಚಿಸಿದರು. ನಮ್ಮಿಂದ ತಪ್ಪಾಗಿದೆ, ಅದನ್ನು ತಿದ್ದಿಕೊಳ್ಳುತ್ತೇವೆ. ಯಾವುದೇ ಧರ್ಮ, ಜಾತಿ, ವ್ಯಕ್ತಿಗೆ ನೋವು ಕೊಡುವುದು ನಮ್ಮ ಉದ್ದೇಶವಾಗಿರಲಿಲ್ಲ. ಕಾರ್ಯಕ್ರವನ್ನು ಗೋಮಾಂಸ ತಿನ್ನುವ ಮೂಲಕ ಸಾಂಕೇತಿಕ ಉದ್ಘಾಟನೆ ಮಾಡಲಾಯಿತು. ಆ ಕಾರ್ಯಕ್ರಮದಲ್ಲಿ ಸಸ್ಯಹಾರ ಹಾಗೂ ಮಾಂಸಹಾರದ ಇತರೆ ಆಹಾರವೂ ಇತ್ತು. ಕಾರ್ಯಕ್ರಮದ ಉದ್ದೇಶ ಆಹಾರ ಪದ್ದತಿಯ ಕುರಿತಾಗಿದ್ದರಿಂದ ಗೋಮಾಂಸ ಸೇವನೆ ಮೂಲಕ ಉದ್ಘಾಟನೆಯಾಗಿದೆ. ಅದು ಘೋರ ಅಪರಾಧವಲ್ಲ ಎಂದರು. ಆದರೆ ಕೆಲ ಹಿಂದೂಪರ ಸಂಘಟನೆಗಳು ಸರ್ಕಾರಿ ಸಭಾಂಗಣದಲ್ಲಿ ಗಂಜಲ ಪೋಕ್ಷಣೆ ಮಾಡಿ ಸಂವಿಧಾನ ವಿರೋಧಿ ಕೆಲಸ ಮಾಡಿದ್ದಾರೆ. ನಾವು ಕಾರ್ಯಕ್ರಮಕ್ಕೆ ಅನುಮತಿ ಪಡೆದಿದ್ದೆವು. ಆದರೆ ಹಿಂದೂಪರ ಸಂಘಟನೆಗಳು ಗಂಜಲ ಫೋಕ್ಷಣೆ ಮಾಡಲು ಯಾವ ಅನುಮತಿ ಪಡೆದಿದ್ದರು ಎಂದು ಪ್ರಶ್ನಿಸಿದ್ದಾರೆ. ಇದು ಅತ್ಯಂತ ಮೌಢ್ಯದ ಸಂಗತಿಯಾಗಿದೆ. ಈ ವಿಚಾರವಾಗಿ ನಾವು ಹೋರಾಟ ಆರಂಭಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಇದನ್ನು ಇಲ್ಲಿಗೆ ನಿಲ್ಲಿಸಬೇಕು ಎಂದರು. ಹಿಂದೂಪರ ಸಂಘಟನೆಗಳ ವರ್ತನೆಯಿಂದ ನೋವಾಗಿದೆ. ಅವರ ಅತಿರೇಕದ ವರ್ತನೆ ನಿಲ್ಲಿಸದಿದ್ದರೆ ನಮ್ಮ ಸಂಘಟನೆಗಳು ದೇಶದಾದ್ಯಂತ ಹೋರಾಟ ಆರಂಭಿಸುತ್ತವೆ ಎಂದು ಎಚ್ಚರಿಸಿದರು.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ